ಪುತ್ತೂರು, ಮಾರ್ಚ್ 29, 2023 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಜೂಜಾಟ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಬಂಟ್ವಾಳ ತಾಲೂಕು, ಅನಂತಾಡಿ ಗ್ರಾಮದ ಬಂಬ್ರೀಂಜ ನಿವಾಸಿ ನಾರಾಯಣ ಗೌಡ ಅವರ ಪುತ್ರ ಲೋಕೇಶ್ ಗೌಡ (40), ಕೊಳ್ನಾಡು ಗ್ರಾಮದ ಸಾಲೆತ್ತೂರು ಅಗರಿಶೆಟ್ಟಿ ನಿವಾಸಿ ಸುಂದರ ಶೆಟ್ಟಿ ಅವರ ಪುತ್ರ ಸತೀಶ್ (45), ಪುತ್ತೂರು ತಾಲೂಕು, ಆರ್ಲಪದವು ಭರಣ್ಯ ನಿವಾಸಿ ಬಾಬು ಮೇರ ಅವರ ಪುತ್ರ ಹೇಮನಾಥ ಬಿ (33), ಕೌಡಿಚ್ಚಾರು ನಿವಾಸಿ ಮೋನಪ್ಪ ಅವರ ಪುತ್ರ ಸಂತೋಷ (40), ಅರಿಯಡ್ಕ ಗ್ರಾಮದ, ಕುರಿಂಜ ದರ್ಬೆತ್ತಡ್ಕ ನಿವಾಸಿ ನಾರಾಯಣ ಅವರ ಪುತ್ರ ಸದಾನಂದ (49), ನಿಡ್ಪಳ್ಳಿ ಗ್ರಾಮದ, ಗೋಳಿತ್ತಡಿ ನಿವಾಸಿ ಕುಗ್ಗು ಅವರ ಪುತ್ರ ಉಮೇಶ (33) ಎಂದು ಹೆಸರಿಸಲಾಗಿದೆ.
ಆರೋಪಿಗಳಿಂದ 6 ಮೊಬೈಲ್ ಫೋನ್ ಗಳು ಹಾಗೂ 35,710/- ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
0 comments:
Post a Comment