ಮಂಗಳೂರು, ಮಾರ್ಚ್ 25, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಘಟಕದಲ್ಲಿ 2 ಅಬಕಾರಿ ಕಾಯ್ದೆ ಪ್ರಕರಣಗಳು ಹಾಗೂ ಒಂದು ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿದೆ.
ಅಬಕಾರಿ ಕಾಯ್ದೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಬಂಟ್ವಾಳ ತಾಲೂಕು, ಮಣಿನಾಲ್ಕೂರು ಗ್ರಾಮದ, ಕೆಂಚನಬೆಟ್ಟು ನಿವಾಸಿ ಲಿಂಗಪ್ಪ ಕರ್ಕೇರಾ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಯಿಂದ 1400 ರೂಪಾಯಿ ಮೌಲ್ಯದ 3.3 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬುಡೋಳಿ ಗ್ರಾಮದ ನಿವಾಸೊ ದೇವಿಪ್ರಸಾದ್ ಶೆಟ್ಟಿ ವಿರುದ್ದ ಅಬಕಾರಿ ಪ್ರಕರಣ ದಾಖಲಾಗಿದ್ದು, ಈತನಿಮದ 1724/- ರೂಪಾಯಿ ಮೌಲ್ಯದ 3.6 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ರಿಫಾಯಿ ನಗರ ನಿವಾಸಿ ಅಬ್ದುಲ್ ಎಂಬವರ ಪುತ್ರ ಮುಹಮ್ಮದ್ ಝಿಯಾದ್ ಎಂದು ಹೆಸರಿಸಲಾಗಿದೆ.
0 comments:
Post a Comment