ಸುಳ್ಯ, ಮಾರ್ಚ್ 01, 2023 (ಕರಾವಳಿ ಟೈಮ್ಸ್) : ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಮುರ್ಕೆತ್ತಿ ಬಳಿಯ ಬೊಟ್ಟತ್ತಾರು ಎಂಬಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯವನ್ನು ಹೊಂದಿ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವೇಳೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿ 13 ಟೆಟ್ರಾ ಪ್ಯಾಕೇಟುಗಳು ಸೇರಿ ಒಟ್ಟು 1.170 ಲೀ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ದಾಳಿ ವೇಳೆ ಆರೋಪಿ, ಸುಳ್ಯ ತಾಲೂಕು, ಪೆರುವಾಜೆ ಗ್ರಾಮದ ಬೊಟ್ಟತ್ತಾರು ನಿವಾಸಿ ಬಾಬು ಎಂಬವರ ಪುತ್ರ ಅಣ್ಣು (30) ಎಂಬಾತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2023 ಕಲಂ 32,34 ಕರ್ನಾಟಕ ಅಬಕಾರಿ ಅಧಿನಿಯಮ 1965ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment