ಮಂಗಳೂರು, ಮಾರ್ಚ್ 02, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಲಯಗಳಿಂದ ವಿವಿಧ ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ದಸ್ತಗಿರಿ ವಾರಂಟ್ ಗಳ ಕಾರ್ಯಗತಗೊಳಿಸಲು ವಿಶೇಷ ಡ್ರೈವ್ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ಡ್ರೈವ್ ಮೂಲಕ ಜಿಲ್ಲೆಯಲ್ಲಿ 2023 ರ ಜನವರಿ 1 ರಿಂದ ಫೆಬ್ರವರಿ 28ರವರೆಗೆ ಒಟ್ಟು 1,003 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ದೀರ್ಘ ಕಾಲದಿಂದ ಕಾರ್ಯಗತ ಆಗದೆ ಬಾಕಿ ಉಳಿದಿದ್ದ 59 ಜಾಮೀನು ರಹಿತ ವಾರಂಟ್ ಗಳಲ್ಲಿ ಆರೋಪಿತರನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಗಳಿಗೆ ಹಾಜರುಪಡಿಸಲಾಗಿದೆ. ಇದೇ ರೀತಿ ಸ್ಪೆಷಲ್ ಡ್ರೈವ್ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಜಾಮೀನು ರಹಿತ ವಾರಂಟ್ ಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment