ಮಂಗಳೂರು, ಮಾರ್ಚ್ 20, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪೆÇಲೀಸ್ ಠಾಣೆಗಳಲ್ಲಿ ಭಾನುವಾರ (ಮಾ 19) ಸಂತ್ರಸ್ಥರ ದಿನ (ವಿಕ್ಟಿಂ ಡೇ) ಪ್ರಯುಕ್ತ ಸಂತ್ರಸ್ಥರ ಸಭೆಗಳನ್ನು ಠಾಣಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು.
ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಸಂತ್ರಸ್ಥರನ್ನು ಕರೆದು, ಅವರ ಪ್ರಕರಣದ ಪ್ರಸ್ತುತ ಹಂತದ ಮಾಹಿತಿ ನೀಡಲಾಯಿತಲ್ಲದೆ ಪ್ರಕರಣಗಳ ತನಿಖೆಗೆ/ ವಿಚಾರಣೆಗೆ ಪೂರಕವಾದ ಮಾಹಿತಿಗಳನ್ನು ಪಡೆಯಲು, ಪ್ರಕರಣದ ಆರೋಪಿಗಳಿಂದ ಯಾವುದೇ ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡುತ್ತಿದ್ದಲ್ಲಿ ಮಾಹಿತಿ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಂಡು ಸಂತ್ರಸ್ಥರಲ್ಲಿ ಭದ್ರತೆಯ ಭಾವನೆ ಮೂಡಿಸುವ ನಿಟ್ಟಿನಲ್ಲಿ, ಹಾಗೂ ಸಂತ್ರಸ್ಥರಿಗೆ ಕಾನೂನಿನ ಪ್ರಕಾರ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ಇಂತಹ ಸಭೆಗಳನ್ನು ನಡೆಸಲಾಗುತ್ತಿದ್ದು, ಸಭೆಗಳಲ್ಲಿ ತಿಳಿದು ಬರುವ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment