ಉಪ್ಪಿನಂಗಡಿ, ಮಾರ್ಚ್ 21, 2023 (ಕರಾವಳಿ ಟೈಮ್ಸ್) : ವ್ಯಕ್ತಿಯ ಕೈಯಲ್ಲಿದ್ದ 10 ಲಕ್ಷ ರೂಪಾಯಿ ಹಣದ ಕಟ್ಟನ್ನು ಅಪರಿಚಿತನೋರ್ವ ಎಗರಿಸಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಪೆದಮಲೆ-ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಮಾ 20 ರಂದು ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ದಿವಂಗತ ಇಸುಬು ಅವರ ಪುತ್ರ ಮಹಮ್ಮದ್ ಕೆ (60) ಅವರು ಮಾರ್ಚ್ 20 ರಂದು ತನ್ನ ಮಗಳು ಮನ್ಸೂರಾ ಎಂಬವಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ ರೂಪಾಯಿ ನಗದು ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬಳಿ ಬಿಳಿ ಬಟ್ಟೆಯ ಚೀಲದಲ್ಲಿ ತುಂಬಿಸಿ ತನ್ನ ಸ್ಕೂಟರಿನ ಸೀಟಿನಡಿಯಲ್ಲಿರಿಸಿ ತನ್ನ ಪತ್ನಿ ಮೈಮುನ ಅವರ ಜೊತೆ ಉಪ್ಪಿನಂಗಡಿ ಆರ್ ಕೆ ಜ್ಯುವೆಲ್ಲರಿಗೆ ಹೋಗುತ್ತಿರುವ ವೇಳೆ ದಾರಿಯ ಮದ್ಯೆ ಅವರ ಅತ್ತೆ ಸರಳಿಕಟ್ಟೆಯ ಕಂಪೆÇ್ಲೀಡಿ ನಿವಾಸಿ ಬಿಪಾತುಮ್ಮ ಅವರು ಮರಣ ಹೊಂದಿದ ಮಾಹಿತಿ ಬಂದ ಹಿನ್ನಲೆಯಲ್ಲಿ ಸರಳಿಕಟ್ಟೆಗೆ ಸ್ಕೂಟರ್ ತಿರುಗಿಸಿ ಪೆದಮಲೆಯಿಂದ ಸರಳಿಕಟ್ಟೆ ರಸ್ತೆಯಲ್ಲಿ ಹೋಗುತ್ತದ್ದಾಗ ಮದ್ಯಾಹ್ನ 1.30 ಗಂಟೆಗೆ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮ, ರಿಫಾಯಿನಗರ ಎಂಬಲ್ಲಿಗೆ ತಲುಪಿದಾಗ ಹೆಂಡತಿ ಮೈಮೂನಾ ಅವರು ಸ್ಕೂಟರಿನಿಂದ ಆಯ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಸ್ಕೂಟರಿನಲ್ಲಿದ್ದ ಹಣದ ಕಟ್ಟನ್ನು ಹಿಡಿದುಕೊಂಡು ಉಪ್ಪಿನಂಗಡಿ ದನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ವಾಪಾಸು ಅಟೋ ರಿಕ್ಷಾದಲ್ಲಿ ಬಂದು ಹೆಂಡತಿಯನ್ನು ಮನೆಗೆ ಬಿಟ್ಟು, ಹಣದ ಕಟ್ಟಿನೊಂದಿಗೆ ವಾಪಾಸು ಅದೇ ರಿಕ್ಷಾದಲ್ಲಿ ಸ್ಕೂಟರ್ ಬಿದ್ದ ಸ್ಥಳಕ್ಕೆ ಬಂದು ಅಟೋ ರಿಕ್ಷಾಕ್ಕೆ ಬಾಡಿಗೆ ಕೊಟ್ಟು, ಮದ್ಯಾಹ್ನ ಸುಮಾರು 3.00 ಗಂಟೆ ಸಮಯಕ್ಕೆ ಕೈಯಲ್ಲಿದ್ದ ಹಣದ ಕಟ್ಟನ್ನು ಸ್ಕೂಟರಿನ ಸೀಟನ್ನು ಮೇಲಕ್ಕೆತ್ತಿ ಹಣದ ಕಟ್ಟನ್ನು ಸೀಟಿನಡಿಯಲ್ಲಿರುವ ಬಾಕ್ಸ್ ನಲ್ಲಿ ಇಡುತ್ತಿದ್ದಂತೆ ಹಿಂಭಾಗದಿಂದ ಬಂದ ಅಪರಿಚತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದಾನೆ. ವ್ಯಕ್ತಿಯನ್ನು ಅವರು ಒಂದಷ್ಟು ದೂರ ಬೆನ್ನಟ್ಟಿದರೂ ಆತ ಕೈಗೆ ಸಿಗದೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಮುಹಮ್ಮದ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 34/2023 ಕಲಂ 392 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಹಣ ಎಗರಿಸಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
0 comments:
Post a Comment