ಲೊರೆಟ್ಟೋ ಫ್ರೆಂಡ್ಸ್ ವತಿಯಿಂದ ದುಬೈಯಲ್ಲಿ “ಯುಎಇ ಟ್ರೋಫಿ-2023” ಕ್ರಿಕೆಟ್ ಟೂರ್ನಿ - Karavali Times ಲೊರೆಟ್ಟೋ ಫ್ರೆಂಡ್ಸ್ ವತಿಯಿಂದ ದುಬೈಯಲ್ಲಿ “ಯುಎಇ ಟ್ರೋಫಿ-2023” ಕ್ರಿಕೆಟ್ ಟೂರ್ನಿ - Karavali Times

728x90

14 March 2023

ಲೊರೆಟ್ಟೋ ಫ್ರೆಂಡ್ಸ್ ವತಿಯಿಂದ ದುಬೈಯಲ್ಲಿ “ಯುಎಇ ಟ್ರೋಫಿ-2023” ಕ್ರಿಕೆಟ್ ಟೂರ್ನಿ

ದುಬೈ, ಮಾರ್ಚ್ 14, 2023 (ಕರಾವಳಿ ಟೈಮ್ಸ್) : ಲೊರೆಟ್ಟೊ ಫ್ರೆಂಡ್ಸ್ ಯುಎಇ ಇದರ ಕೋರ್ ಕಮಿಟಿ ಆಶ್ರಯದಲ್ಲಿ “ಯುಎಇ ಟ್ರೋಫಿ-2023” ಮೆಗಾ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಮಾರ್ಚ್ 12 ರಂದು ದುಬೈಯ ಓವಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಎಂಸಿಸಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. 

ದುಬೈಯಲ್ಲಿ ನೆಲೆಸಿರುವ ಮಂಗಳೂರು ಮತ್ತು ಉಡುಪಿ ವಲಯದ ಅಂಡರ್ ಆರ್ಮ್ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. 

ಸಂಯೋಜಕ ರೋಶನ್ ನೊರೋನ್ಹಾ, ಕೋಶಾಧಿಕಾರಿ ಅರುಣ್ ಬರ್ಬೋಜಾ, ಕೋರ್ ಕಮಿಟಿ ಸದಸ್ಯರುಗಳಾದ ರೂಪೇಶ್ ಪಿಂಟೋ, ರಾಯ್ ಡಿ’ಸೋಜಾ, ವಿನೋದ್ ಪಿಂಟೋ, ಸಚಿನ್ ನೊರೋನ್ಹಾ, ಪ್ರಸನ್ನ ವಿನೋದ್ ಪಿಂಟೋ, ಡೆಸ್ಮಂಡ್ ನೊರೊನ್ಹಾ, ಶ್ರೀಮತಿ ಗ್ರೆಟ್ಟಾ ಫೆರ್ನಾಂಡಿಸ್ ಮತ್ತು ಶ್ರೀಮತಿ ಸೋನಾಲಿ ಪಿಂಟೋ  ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಕೋರ್ ಕಮಿಟಿ ಸದಸ್ಯ ಡೊನಾಲ್ಡ್ ನೊರೊನ್ಹಾ  ಕಾರ್ಯಕ್ರಮ ನಿರೂಪಿಸಿದರು.

ಡಿಜೆ ನಾರ್ಮನ್ ಮತ್ತು ಡಿಜೆ ಡೆಲಾನ್ ಲೋಬೊ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಬ್ರಾಡ್‍ವೇ ಈವೆಂಟ್ಸ್ ಆಂಡ್ ಪ್ರೊಡಕ್ಷನ್ ಇದರ ಲವ್ಲಿನ್ ಡಿಮೆಲ್ಲೋ ಭಾಗವಹಿಸಿದ್ದರು. 

ಲೇಟನ್ ತಂಡ ಚಾಂಪಿಯನ್ 

ಕೂಟದಲ್ಲಿ ಲೇಟನ್ ತಂಡ ಎಬಿ ಪ್ರಥಮ ಸ್ಥಾನ ಪಡೆದುಕೊಂಡರೆ, ಕ್ಯಾಥೋಲಿಕ್ ಸನ್ ಶೈನ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಲೇಟನ್ ಟೀಂ ಎಬಿ ತಂಡದ ಟೈಸನ್ ವಿಲ್ಸನ್ ರೆಬೆಲ್ಲೊ ಉತ್ತಮ ದಾಂಡಿಗ ಪ್ರಶಸ್ತಿ ಪಡೆದುಕೊಂಡರೆ, ಅದೇ ತಂಡದ ಸುದೀಶ್ ಸಲ್ದಾನಾ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು. ನೆಷ್ಟನ್ ಶರಣ್ ಪಿಂಟೋ ಪಂದ್ಯದ ಅಂತಿಮ ಆಟಗಾರ ಪ್ರಶಸ್ತಿ ಕ್ಯಾಥೋಲಿಕ್ ಸನ್ ಶೈನ್ ತಂಡದ ನೆಲ್ಸನ್ ಸಂತೋಷ್ ಫೆರ್ನಾಂಡಿಸ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದುಕೊಂಡರು. 

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದುಬೈಯ ರೆಸಾರ್ಟ್ ಸಪ್ಲೈಸ್ ಇದರ ವ್ಯವಸ್ಥಾಪಕ ನಿರ್ದೇಶಕ ಮನೋಜ್ ವಾಸ್, ಟ್ರುಸಪ್ಲೈ ಜನರಲ್ ಟ್ರೇಡಿಂಗ್ ಮತ್ತು ಲೇಟನ್ ಶಿಪ್ಪಿಂಗ್ ಇದರ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜಾನ್ ಲ್ಯಾನ್ಸಿ ಡಿಸೋಜಾ, ಟ್ರಾನ್ಸ್ ವಿಲ್ ಫೇಡ್ ಆಕ್ಸೆಸ್ ಕ್ರೇಡಲ್ಸ್ ಮತ್ತು ವಿಲ್ಸ್ ರೆಸ್ಟೋರೆಂಟ್ ದುಬೈ ಇದರ ವ್ಯವಸ್ಥಾಪಕ ನಿರ್ದೇಶಕ ವಿಲ್ಫ್ರೆಡ್ ಥಾಮಸ್ ಫೆರ್ನಾಂಡಿಸ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. 

   ಕೋರ್ ಕಮಿಟಿ ಸದಸ್ಯ ಲಾಯ್ಡ್ ರೋಡ್ರಿಗಸ್ ವಂದಿಸಿದರು. ಡೇವಿಡ್ ನೊರೊನ್ಹಾ ಸಮಾರೋಪ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಲೊರೆಟ್ಟೋ ಫ್ರೆಂಡ್ಸ್ ವತಿಯಿಂದ ದುಬೈಯಲ್ಲಿ “ಯುಎಇ ಟ್ರೋಫಿ-2023” ಕ್ರಿಕೆಟ್ ಟೂರ್ನಿ Rating: 5 Reviewed By: karavali Times
Scroll to Top