ರಾಕೇಶ್ ಕುಮಾರ್ ರೈ, ತೃತೀಯ ಬಿ ಎ, ಶ್ರೀ ರಾಮ ಕಾಲೇಜು ಕಲ್ಲಡ್ಕ
ಹಿಂದುಗಳು ಧಾರ್ಮಿಕ ಶಿಕ್ಷಣಕ್ಕೆ ಯಾಕೆ ಒತ್ತು ನೀಡಬೇಕು ಎಂದರೆ, ಧಾರ್ಮಿಕ ಶಿಕ್ಷಣ ಎನ್ನುವುದು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಇರುವ ಒಂದೇ ಒಂದು ಮಾರ್ಗ. ಈಗಿನ ಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ನಾವೇ ಒಪ್ಪಿಕೊಳ್ಳುವುದಿಲ್ಲ ಯಾಕೆ? ಯಾಕೆಂದರೆ ಧಾರ್ಮಿಕ ಶಿಕ್ಷಣದ ಕೊರತೆಯಿಂದ ನಮ್ಮ ಧರ್ಮದವರೇ ನಮ್ಮ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ವಿದೇಶಿಯವರು ಕೂಡ ಒಪ್ಪಿಕೊಳ್ಳುತ್ತಾರೆ. ನಮಗೆ ಯಾಕೆ ಒಪ್ಪಿಕೊಳ್ಳಲು ಆಗೋದಿಲ್ಲ?
ಬೇರೆ ಧರ್ಮದಲ್ಲಿ ಅವರ ಸಂಸ್ಕೃತಿಯನ್ನು ಯಾಕೆ ಬಿಟ್ಟು ಕೊಡುವುದಿಲ್ಲವೆಂದರೆ ಬೇರೆ ಧರ್ಮದಲ್ಲಿ ಕೂಡ ಧಾರ್ಮಿಕ ಶಿಕ್ಷಣವೆನ್ನುವುದು ಚಿಕ್ಕ ವಯಸ್ಸಿನಲ್ಲೆ ಕಲಿಸುತ್ತಾರೆ. ಹಿಂದುಗಳಲ್ಲಿ ಧಾರ್ಮಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಅವತ್ತು ವಿದೇಶಿಗರು ಅಕ್ರಮಣ ಮಾಡಿದರು ಕೂಡ ನಮ್ಮ ಸಂಸ್ಕೃತಿಯನ್ನು ನಮ್ಮ ಪೂರ್ವಜರು ಬಿಟ್ಟುಕೊಡಲಿಲ್ಲ. ನಮ್ಮ ದೇಶದ ಮೇಲೆ ಮುಸ್ಲಿಮರು, ಪೆÇೀರ್ಚುಗೀಸರು, ಡಚ್ಚರು, ಗ್ರೀಕರು ಆಕ್ರಮಣ ಮಾಡಿದರೂ ನಮ್ಮ ಸಂಸ್ಕೃತಿ ನಾಶವಾಗಿರುವುದಿಲ್ಲ. ಆದರೆ ಯಾವಾಗ ಬ್ರಿಟಿಷರು ನಮ್ಮ ದೇಶವನ್ನು ಆಳಲು ಪ್ರಾರಂಭಿಸಿದರೋ ಅಂದಿನಿಂದ ನಮ್ಮ ಸಂಸ್ಕೃತಿಯು ವಿನಾಶಕ್ಕೆ ತುತ್ತಾಯಿತು. ಅವರು ನಮ್ಮ ದೇಶವನ್ನು ಬಿಟ್ಟು ಹೋದರೂ ಅವರ ಪ್ರಭಾವ ಇನ್ನೂ ಕಡಿಮೆ ಆಗದೆ ಹೆಚ್ಚಾಗುತ್ತಲೇ ಹೋಯಿತು.
ಸಂಸ್ಕೃತಿ ಎನ್ನುವುದು ನಾಶವಾಗಬಾರದು ಎಂಬ ದೃಷ್ಟಿಯಿಂದ ಎಲ್ಲಾ ದೇವಸ್ಥಾನಗಳಲ್ಲಿ, ಮನೆ-ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಆರಂಭಿಸಿ ನಮ್ಮ ಸಂಸ್ಕೃತಿಯ ಅಡಿಪಾಯ ಗಟ್ಟಿಗೊಳಿಸಿದರೆ ಮಾತ್ರ ಮುಂದಿನ ಪೀಳಿಗೆಗಾದರೂ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇರಬಹುದು. ಬನ್ನಿ ಈ ನಮ್ಮ ಸಂಸ್ಕೃತಿಯನ್ನು ಮತ್ತೆ ಬೆಳೆಸೋಣ, ಧಾರ್ಮಿಕ ಶಿಕ್ಷಣದೊಂದಿಗೆ. ಈ ಬಗ್ಗೆ ಎಲ್ಲಾ ಭಾರತೀಯರು ದಿಟ್ಟ ಹೆಜ್ಜೆಯನ್ನಿಡೋಣ.??
0 comments:
Post a Comment