ಮಂಗಳೂರು, ಮಾರ್ಚ್ 22, 2023 (ಕರಾವಳಿ ಟೈಮ್ಸ್) : ಮುಸ್ಲಿಮರ ಪವಿತ್ರ ರಮಳಾನ್ ತಿಂಗಳ ಚಂದ್ರದರ್ಶನವು ಬುಧವಾರ ಕೇರಳ ರಾಜ್ಯದ ಕಲ್ಲಿಕೋಟೆ ಸಮೀಪದ ಕಾಪಾಡ್ ಎಂಬಲ್ಲಿ ಬುಧವಾರ ಸಂಜೆ ಆಗಿರುವ ಹಿನ್ನಲೆಯಲ್ಲಿ ಮಾರ್ಚ್ 23 ರ ಗುರುವಾರದಿಂದ ರಂಝಾನ್ ಉಪವಾಸ ಆಚರಿಸುವಂತೆ ಕರಾವಳಿ ಜಿಲ್ಲೆಗಳ ಖಾಝಿಗಳು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‍ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಖಾಝಿ ಅಲ್‍ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಗುರುವಾರದಿಂದ ರಂಝಾನ್ ಉಪವಾಸ ಆರಂಭಿಸುವಂತೆ ಮುಸ್ಲಿಮರಿಗೆ ಸೂಚಿಸಿದ್ದಾರೆ.
0 comments:
Post a Comment