ಬೆಂಗಳೂರು, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್ ಧ್ರುವನಾರಾಯಣ್ ಅವರ ಅಗಲಿಕೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟ. ಕಾಂಗ್ರೆಸ್ ಪಕ್ಷ ಓರ್ವ ಕರ್ಮಯೋಗಿ ದಕ್ಷ ನಾಯಕನನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ಧ್ರುವನಾರಾಯಣ್ ಅವರ ಜೊತೆ ನನಗೆ ಉತ್ತಮ ಒಡನಾಡ ಇತ್ತು. ಅವರ ಅಗಲಿಕೆಯಿಂದ ನಾನು ಅತೀವ ದುಃಖಿತನಾಗಿದ್ದೇನೆ. ಭಾರವಾದ ಹೃದಯದಿಂದ ಮೈಸೂರಿನ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದೆ. ಧ್ರುವನಾರಾಯಣ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರು ಮತ್ತು ಅಸಂಖ್ಯಾತ ಬೆಂಬಲಿಗರಿಗೆ ನೀಡಲಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಭಾವುಕರಾದರು.
ದಿವಂಗತ ನಾಯಕ ಆರ್ ಧ್ರುವನಾರಾಯಣ ಮೈಸೂರು ಇವರ ವಿಜಯ ನಗರ ಸ್ವಗೃಹಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಸಾಂತ್ವನ ಹೇಳಿ ಮಾತನಾಡಿದರು.
0 comments:
Post a Comment