ಬಂಟ್ವಾಳ, ಮಾರ್ಚ್ 26, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ಗೂಡಿನಬಳಿ ನೇತ್ರಾವತಿ ಹಳೆ ಸೇತುವೆಯ ಮೇಲಿಂದ ಪುತ್ತೂರಿನ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮಧ್ಯಾಹ್ನದ ವೇಳೆಗೆ ನಡೆದಿದೆ.
ಮೃತನನ್ನು ಪುತ್ತೂರು ಸಮೀಪದ ಕೆಮ್ಮಿಂಜೆ ನಿವಾಸಿ, ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಅಂಗಡಿ ಹೊಂದಿರುವ ವಿಘ್ನೇಶ್ ಕಾಮತ್ (32) ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಸ್ಪಷ್ಟ ವಿವರ ಹಾಗೂ ಕೃತ್ಯಕ್ಕೆ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ.
ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಬಂದ ಈತ ಸೇತುವೆ ಮೇಲೆ ಸ್ಕೂಟರ್ ಇಟ್ಟು ನೇತ್ರಾವತಿ ನದಿಗೆ ಹಾರಿದ್ದಾನೆ. ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ಈಜುಗಾರರಾದ ಇಬ್ರಾಹಿಂ, ಮುಹಮ್ಮದ್ ಮಮ್ಮು ನೇತೃತ್ವದ ಯುಕವರು ಮೃತದೇಹವನ್ನು ನದಿ ನೀರಿನಿಂದ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ಬಳಿಕ ಯುವಕನ ಸಂಬಂಧಿಕರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು, ಪೊಲೀಸರು ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.
0 comments:
Post a Comment