ಬಂಟ್ವಾಳ, ಮಾರ್ಚ್ 07, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಗ್ರಾಮದ ಗುರಿಮಜಲು ನಿವಾಸಿ ಹರೀಶ್ ಎಂಬಾತ ತನ್ನ ಅಂಗಡಿಯ ಶೆಡ್ ಬದಿಯ ತೋಟದಲ್ಲಿ ಅಕ್ರಮ ಮದ್ಯ ಶೇಖರಣೆ ಮಾಡಿದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಪೊಲೀಸರು ಅಂದಾಜು 2240/- ರೂಪಾಯಿ ಮೌಲ್ಯದ ಒಟ್ಟು 5.760 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣಾ ಅಪರಾಧ ಕ್ರಮಾಂಕ 22/2023 ಕಲಂ 32, 34 ಕೆ.ಇ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment