ಬಂಟ್ವಾಳ, ಮಾರ್ಚ್ 30, 2023 (ಕರಾವಳಿ ಟೈಮ್ಸ್) : ಮಂಗಳೂರಿನ ನಂತೂರಿನಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಹವಾ ನಿಯಂತ್ರಕ (ಎಸಿ) ಜೋಡಿಸುತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು, ಬಂಟ್ವಾಳ ತಾಲೂಕಿನ ಯುವ ಟೆಕ್ನಿಷಿಯನ್ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ವೇಳೆಗೆ ನಡೆದಿದೆ.
ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ಜೋಯೆಲ್ ತಾವ್ರೋ (22) ಎಂಬವರೇ ಮೃತಪಟ್ಟ ಯುವ ಎಸಿ ಟೆಕ್ನಿಷಿಯನ್.
ಮಂಗಳೂರು-ನಂತೂರಿನ ಹಮಾರಾ ರೆಫ್ರಿಜರೇಟರ್ ಸಂಸ್ಥೆಯಲ್ಲಿ ಟೆಕ್ನಿಷಿಯನ್ ಆಗಿ ಇತ್ತೀಚೆಗಷ್ಟೆ ಕೆಲಸಕ್ಕೆ ಸೇರಿದ್ದ ವಿನಯ್ ಬುಧವಾರ ಸಂಜೆ ಇಲ್ಲಿನ ಮೌಂಟ್ ಟಿಯಾರಾ ಅಪಾರ್ಟ್‍ಮೆಂಟಿನ 9ನೇ ಮಹಡಿಯ ಮನೆಯ ಹೊರಭಾಗದಲ್ಲಿ ಹವಾ ನಿಯಂತ್ರಕ (ಎಸಿ) ಜೋಡಿಸುತ್ತಿದ್ದ ವೇಳೆ ಆಕಸ್ಮಾತ್ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕದ್ರಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೆನ್ಲಾಕ್ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
0 comments:
Post a Comment