ಬಂಟ್ವಾಳ, ಮಾರ್ಚ್ 09, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಬಾಳ್ತಿಲ ಗ್ರಾಮದ ದಾಸಕೋಡಿ ನಿವಾಸಿ ವೈಷ್ಣವಿ (17) ಗುರುವಾರ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ ಹಾಗೂ ಕಲ್ಲಡ್ಕ ಶಾಲೆಯಲ್ಲೇ ಶಿಕ್ಷಕಿಯಾಗಿರುವ ಸೌಮ್ಯ ಅವರ ಪುತ್ರಿಯಾಗಿರುವ ವೈಷ್ಣವಿ ಕಲ್ಲಡ್ಕದ ಶ್ರೀರಾಮ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಆಕೆಯ ತಂದೆ ಚಂದ್ರಶೇಖರ ಅವರು ಗುರುವಾರ ದ್ವಿತೀಯ ಪಿಯುಸಿ ಪರೀಕ್ಷಾ ವಿಶೇಷ ಕರ್ತವ್ಯವಿದ್ದುದರಿಂದ ಮನೆಯಿಂದ ಬೆಳಿಗ್ಗೆ 6.30ಕ್ಕೆ ಹೋಗಿರುತ್ತಾರೆ. ವೈಷ್ಣವಿ ಕೂಡಾ ಬೆಳಿಗ್ಗೆ ಕಲ್ಲಡ್ಕ ಶಾಲೆಗೆ ಬಂದಿದ್ದು, ಶಾಲಾ ಗ್ರಂಥಾಲಯದಲ್ಲಿ ಓದುತ್ತಿದ್ದಳು, ಬೆಳಿಗ್ಗೆ 9.45ಕ್ಕೆ ವೈಷ್ಣವಿ ನನಗೆ ಗ್ರಂಥಾಲಯದಲ್ಲಿ ಓದಲು ಆಗುತ್ತಿಲ್ಲ, ಮನೆಗೆ ಹೋಗಿ ಓದುವುದಾಗಿ ತಾಯಿಗೆ ಹೇಳಿ ಮನೆಗೆ ಹೋಗಿರುತ್ತಾಳೆ. ನಂತರ ತಾಯಿ ಸೌಮ್ಯ ಅವರು ನೆರೆ ಮನೆಯ ಶಾರದಾ ಎಂಬವರಿಗೆ ಕರೆ ಮಾಡಿ ಮಗಳು ಮನೆಗೆ ಬಂದ ಬಗ್ಗೆ ವಿಚಾರಿಸಿದ್ದು, ಈ ಸಂದರ್ಭ ಶಾರದಾ ಅವರು ಸೌಮ್ಯ ಅವರ ಮನೆಗೆ ಹೋದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಿದ್ದು, ಕರೆದರೂ ಪ್ರತಿಕ್ರಯಿಸುತ್ತಿಲ್ಲ ಎಂದು ಹೇಳಿದ ಹಿನ್ನಲೆಯಲ್ಲಿ ಬೆಳಿಗ್ಗೆ 10.15 ಗಂಟೆಗೆ ತಾಯಿ ಸೌಮ್ಯ ಅವರು ಮನೆಗೆ ಹೋದಾಗ ಬಾಗಿಲು ಲಾಕ್ ಮಾಡಿದ್ದು, ಬಾಗಿಲನ್ನು ಮುರಿದು ಮನೆಯ ಒಳಗೆ ಹೋದಾಗ ಮನೆಯ ಊಟದ ಹಾಲ್ ನಲ್ಲಿ ಮಗಳು ವೈಷ್ಣವಿ ನೈಲಾನ್ ಸೀರೆಯಲ್ಲಿ ಪ್ಯಾನಿಗೆ ಕಟ್ಟಿ ನೇಣು ಬಿಗಿದುಕೊಂಡಿದ್ದು ಕಂಡು ಬಂದಿದೆ. ತಕ್ಷಣ ನೇಣು ಬಿಚ್ಚಿ ಕಲ್ಲಡ್ಕ ಪುಪ್ಪರಾಜ ಆಸ್ವತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವದಾಗಿ ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಿಯುಸಿ ಪರೀಕ್ಷಾ ಭಯದಿಂದಲೋ ಅಥವಾ ಇತರ ಕಾರಣದಿಂದಲೋ ಈ ಕೃತ್ಯ ಎಸಗಿರುವ ಬಗ್ಗೆ ಶಂಕಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment