ಮಂಗಳೂರು, ಮಾರ್ಚ್ 02, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕುಗಳಲ್ಲಿರುವ ಪರವಾನಗಿ ಪಡೆದ ಬಂದೂಕು ಮತ್ತು ಮದ್ದುಗುಂಡುಗಳ ಠೇವಣಿದಾರರು ಮತ್ತು ಮಾರಾಟಗಾರ ಅಂಗಡಿ ಹಾಗೂ ಗೋಡೌನ್‍ಗಳಿಗೆ ಪೊಲೀಸ್ ಅಧಿಕಾರಿಗಳು ಗುರುವಾರ ಅನಿರೀಕ್ಷಿತ ಭೇಟಿ ನೀಡಿ ರಿಜಿಸ್ಟರ್ ಹಾಗೂ ದಾಸ್ತಾನುಗಳನ್ನು ಪರಿಶೀಲಿಸಿದರು.
ಕಾನೂನು ಬಾಹಿರವಾಗಿ ಯಾವುದೇ ವ್ಯವಹಾರ ನಡೆಸದಂತೆ ಹಾಗೂ ದಾಸ್ತಾನು ಮಾಡದಂತೆ ಸೂಕ್ತ ಎಚ್ಚರಿಕೆ ನೀಡಿರುತ್ತಾರೆ.
0 comments:
Post a Comment