ಮಂಗಳೂರು, ಮಾರ್ಚ್ 22, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1 ಮಾದಕ ದ್ರವ್ಯ ನಿಷೇದ ಕಾಯ್ದೆಯಡಿ ಗಾಂಜಾ ಸೇವನೆ ಪ್ರಕರಣ ಹಾಗೂ 2 ಅಬಕಾರಿ ಕಾಯ್ದೆ ಪ್ರಕರಣಗಳು ದಾಖಲಾಗಿವೆ.
ಗಾಂಜಾ ಸೇವನೆ ಪ್ರಕರಣದಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಆರೋಪಿ, ಸಜಿಪಮುನ್ನೂರು ಗ್ರಾಮದ, ನಂದಾವರ ಪಡ್ಪು ನಿವಾಸಿ ಯಕೂಬ್ ಎಂಬವರ ಪುತ್ರ ಮೊಹಮ್ಮದ್ ಶಾಕೀರ್ (22) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಅಬಕಾರಿ ಕಾಯ್ದೆ ಪ್ರಕರಣಗಳಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿ ಗ್ರಾಮದ ಸಾಗು ಮನೆ ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರ ಪುಷ್ಪರಾಜ ಶೆಟ್ಟಿ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿಯಿಂದ 2220 ರೂಪಾಯಿ ಮೌಲ್ಯದ 5.85 ಲೀಟರ್ ಮದ್ಯ ಹಾಗೂ 950 ರೂಪಾಯಿ ನಗದು ಮತ್ತು ಟಿವಿಎಸ್ ಕಂಪೆನಿಗೆ ಸೇರಿದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಡಿಕೇರಿ ತಾಲೂಕು, ಕೊಯಿನಾಡು ಗ್ರಾಮದ ಪೆಲ್ತಾಡ್ಕ ನಿವಾಸಿ ಧನಂಜಯ ಎಂಬವರ ಪುತ್ರ ಸಚಿನ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದ್ದು, 3337/- ರೂಪಾಯಿ ಮೌಲ್ಯದ 8.55 ಲೀಟರ್ ಮದ್ಯ ಹಾಗೂ ಅಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
0 comments:
Post a Comment