ಮಂಗಳೂರು, ಮಾರ್ಚ್ 13, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ, ಜಿಲ್ಲಾ ಎಸ್ಪಿ ಡಾ ವಿಕ್ರಮ್ ಅಮಟೆ ಅವರು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಅಂತರ ರಾಜ್ಯ ಗಡಿಯಲ್ಲಿರುವ ಮುರೂರು, ಮಂಡೆಕೋಲು, ಕೊಲ್ಚಾರು, ನಾರ್ಕೋಡು, ಕನ್ಯಾನ, ಸಾರಡ್ಕ, ಸಾಕೇತುರು, ಆನೇಕಲ್ ಗಳಲ್ಲಿರುವ ಅಂತರ ರಾಜ್ಯ ಚೆಕ್ ಪೊಸ್ಟ್ ಗಳಿಗೆ ಹಾಗೂ ಕಲ್ಲುಗುಂಡಿ ಅಂತರ ಜಿಲ್ಲೆ ಚೆಕ್ ಪೊಸ್ಟ್ ಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣೆ ಕರ್ತವ್ಯಗಳ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಚೆಕ್ ಪೊಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಚುನಾವಣೆ ಸೂಕ್ಷ್ಮ ಪ್ರದೇಶಗಳಾದ ಗುತ್ತಿಗಾರು ಹಾಗೂ ಜಾಲಸೂರುಗಳಿಗೂ ಭೇಟಿ ನೀಡಿ ಸಾರ್ವಜನಿಕರ ಸಭೆ ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿರುತ್ತಾರೆ. ಗುತ್ತಿಗಾರುವಿನಲ್ಲಿ ರೌಡಿ ಶೀಟರ್‍ಗೆ ಎಚ್ಚರಿಕೆಯನ್ನು ನೀಡಿರುತ್ತಾರೆ. ಸುಳ್ಯ ಹಾಗೂ ವಿಟ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿದರು.
ಕೇರಳ ರಾಜ್ಯದ ಗಡಿಯಲ್ಲಿರುವ ಆಡೂರ್ ಪೊಲೀಸ್ ಠಾಣೆಯ ಚೆಕ್ ಪೊಸ್ಟ್‍ಗೆ ಭೇಟಿ ನೀಡಿ ಕೇರಳ ರಾಜ್ಯದ ಆಡೂರು ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚೆಕ್ ಪೊಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸಹಕಾರ ನೀಡುವಂತೆ ಚರ್ಚೆ ನಡೆಸಿದರು.
0 comments:
Post a Comment