ಮಂಗಳೂರು, ಮಾರ್ಚ್ 18, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ವ್ಯಾಪ್ತಿಯಲ್ಲಿ 5 ಮಾದಕ ದ್ರವ್ಯ ನಿಷೇದ ಕಾಯ್ದೆ ಪ್ರಕರಣಗಳು ಶುಕ್ರವಾರ ದಾಖಲಾಗಿದೆ.
ಪುತ್ತೂರು ಟೌನ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ ಡಿ ಪಿ ಎಸ್ ಪ್ರಕರಣ ದಾಖಲಾಗಿದ್ದು, ಆರೋಪಿತರಾದ ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ನೇಜಿಕಾರು-ಅಂಬೋಟ್ಟು ನಿವಾಸಿ ದಿವಂಗತ ಹಸನಬ್ಬ ಎಂಬವರ ಪುತ್ರ ಮೊಹಮ್ಮದ್ ಶಾಫಿ (30), ರಫೀಕ್ ಅಲಿಯಾಸ್ ಮುನ್ನಾ ಕಬಕ-ಪುತ್ತೂರು ಎಂಬವರ ವಿರುದ್ದ ಪ್ರಕರಣ ದಾಖಲಾಗಿದ್ದು, 6 ಸಾವಿರ ರೂಪಾಯಿ ಮೌಲ್ಯದ 190 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಉಪ್ಪಿನಂಗಡಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಬಂಟ್ವಾಳ ತಾಲೂಕು, ಬಿಳಿಯೂರು ಗ್ರಾಮದ ಕರ್ವೇಲು ಕ್ವಾಟ್ರಸ್ ಮನೆ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮಹಮ್ಮದ್ ಸಲೀಂ @ ಸಲೀಂ @ ಚಮ್ಮು @ ಜಿದ್ದ ಸಲೀಂ (39) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದ್ದು, 20 ಸಾವಿರ ರೂಪಾಯಿ ಮೌಲ್ಯದ 6.6 ಎಂಡಿಎಂಎ ಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ 3 ಮಾದಕ ವಸ್ತು ಸೇವನೆ ಪ್ರಕಾರಣಗಳು ದಾಖಲಾಗಿದ್ದು, ಆರೋಪಿಗಳಾದ ಕಡಬ ತಾಲೂಕು, ಪೆರಾಬೆ ಗ್ರಾಮದ ಕುಂತೂರು-ಬೆಲ್ಪಾಡಿ ನಿವಾಸಿ ದಿವಂಗತ ಆದಂ ಎಂಬವರ ಪುತ್ರ ಜುನೈದ್ ಅಲಿಯಾಸ್ ಜುನ್ನಿ (22), ಕೊಯಿಲ ಗ್ರಾಮದ ಆತೂರು ನಿವಾಸಿ ದಿವಂಗತ ಉಸ್ಮಾನ್ ಎಂಬವರ ಪುತ್ರ ಮುಹಮ್ಮದ್ ಅಶ್ರಫ್ ಅಲಿಯಾಸ್ ಅಚ್ಚು (30) ಹಾಗೂ ಪುತ್ತೂರು ತಾಲೂಕು, ನೆಕ್ಕಿಲಾಡಿ ಗ್ರಾಮದ ಕರುವೇಲು ನಿವಾಸಿ ದಿವಂಗತ ಕುಂಞÂ ಅಬ್ದುಲ್ಲ ಎಂಬವರ ಪುತ್ರ ಮುಹಮ್ಮದ್ ಜುನೈದ್ (22) ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
0 comments:
Post a Comment