ಬಂಟ್ವಾಳ, ಮಾರ್ಚ್ 18, 2023 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಗೂಡಿನಬಳಿಯಲ್ಲಿ ರಸ್ತೆ ಬದಿಯ ಅಂಗಡಿಯ ತಡೆಗೋಡೆಗೆ ಕಾರು ಗುದ್ದಿ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಾರು ಚಾಲಕ, ಬಿ ಸಿ ರೋಡಿನ ಹಿರಿಯ ನ್ಯಾಯವಾದಿ, ನಂದಾವರ ನಿವಾಸಿ ಹಾತಿಂ ಅಹ್ಮದ್ ಅವರು ಕಾರು ಚಲಾಯಿಸುತ್ತಿದ್ದ ವೇಳೆ ಅನಾರೋಗ್ಯಕ್ಕೀಡಾಗಿ ನಿಯಂತ್ರಣ ಮೀರಿ ಕಾರು ರಸ್ತೆ ಬದಿಯ ಅಂಗಡಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಿಂದ ತೀವ್ರ ಗಾಯಗೊಂಡಿರುವ ಚಾಲಕ, ನ್ಯಾಯವಾದಿ ಹಾತಿಂ ಅಹ್ಮದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಹ ಪ್ರಯಾಣಿಕ ತಾಜುದ್ದೀನ್ ಅವರಿಗೆ ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
0 comments:
Post a Comment