ಧರ್ಮಸ್ಥಳ, ಮಾರ್ಚ್ 13, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕು ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಜುಗಾರಿ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸೈ ಅನಿಲ್ ಕುಮಾರ್ ನೇತೃತ್ವದ ಪೊಲೀಸರು ಜುಗಾರಿ ಆಟಕ್ಕೆ ಬಳಸುತ್ತಿದ್ದ ಸೊತ್ತುಗಳ ಸಹಿತ 8 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮಾ 12 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪೊಲೀಸರು ಈ ದಾಳಿ ಸಂಘಟಿಸಿದ್ದು, ಆರೋಪಿಗಳಾದ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಅರೆಕಲ್ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ರಹೀಂ (44), ಮುಂಡಾಜೆ ಗ್ರಾಮದ ದೇವಗುಡಿ ಮನೆ ನಿವಾಸಿ ಏಜಸ್ಸ್ ಪಾಷಾ ಎಂಬವರ ಪುತ್ರ ಫಯಾಜ್ ಪಾಷಾ (33), ಕಡಿರುದ್ಯಾರ ಗ್ರಾಮದ ಕಾಣರ್ಪ ನಿವಾಸಿ ಎಚ್ ಎಂ ದಾಮೋದರ ಎಂಬವರ ಪುತ್ರ ರಾಜೇಶ್ (46), ತೋಟತ್ತಾಡಿ ಗ್ರಾಮದ ಮುಂಡಾಯಿಲ್ ನಿವಾಸಿ ಕುರುವ ಎಂಬವರ ಪುತ್ರ ಅನಿಲ್ (45), ಸಿದ್ದೀಕ್ ಯಾನೆ ಅರೆಕ್ಕಲ್ ಸಿದ್ದೀಕ್, ಕೃಷ್ಣ ಯಾನೆ ಕಿಟ್ಟ ಗಾಂಧಿನಗರ, ಸಂತೋಷ್ ಗಾಂಧಿನಗರ, ಸುಧಾಕರ ಕೊಯಿಕುರಿ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತರಿಂದ 4 ಮೊಬೈಲ್ ಫೋನ್ ಸಹಿತ ಸುಮಾರು 11,870/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2023 ಕಲಂ 87 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment