ಬಂಟ್ವಾಳ, ಮಾರ್ಚ್ 06, 2023 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಭಾನುವಾರ ಯಶಸ್ವೀ ಹಾಗೂ ಅದ್ದೂರಿ ತೆರೆ ಕಂಡ ಮೂಡೂರು ಪಡೂರು ಜೋಡುಕರೆ “ಬಂಟ್ವಾಳ ಕಂಬಳ” ಯಶಸ್ಸಿನಲ್ಲಿ ತೆರೆ ಮರೆಯಲ್ಲಿ ಶಕ್ತಿ ಮೀರಿ ಕಾರ್ಯನಿರ್ವಹಿಸಿದ ಶಬ್ಬೀರ್ ಸಿದ್ದಕಟ್ಟೆ ಹಾಗೂ ಡೆಂಝಿಲ್ ಹರ್ಮನ್ ನೊರೊನ್ಹಾ ಅವರನ್ನು ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ, ಸಮಿತಿಯ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್ ಅವರು ಸೋಮವಾರ ಸಮಿತಿಯ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಕೆ ಮಾಯಿಲಪ್ಪ ಸಾಲ್ಯಾನ್, ಸದಾಶಿವ ಬಂಗೇರ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಇಬ್ರಾಹಿಂ ನವಾಝ್ ಬಡಕಬೈಲು, ಬಿ ವಾಸು ಪೂಜಾರಿ, ಸುದರ್ಶನ್ ಜೈನ್, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment