ಬಂಟ್ವಾಳ, ಮಾರ್ಚ್ 09, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ಸಾರ್ವಜನಿಕರ, ಜನಸಾಮಾನ್ಯರ ಭೇಟಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮಕ್ಕೆ ಮಾರ್ಚ್ 10 ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ಚಾಲನೆ ದೊರೆಯಲಿದ್ದು, ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಹಾಗೂ ಅಮ್ಮುಂಜೆ ಗ್ರಾಮಗಳಲ್ಲಿ ಯಾತ್ರೆ ನಡೆಯಲಿದ್ದು, ಸಂಜೆ 6 ಗಂಟೆಗೆ ಬಡಕಬೈಲು ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮದೊಂದಿಗೆ ದಿನದ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.
ಪ್ರಥಮ ದಿನದ ಕಾರ್ಯಕ್ರಮವನ್ನು ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಉದ್ಘಾಟಿಸಲಿದ್ದು, ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ.
ಮಾ 11 ರಂದು ಶನಿವಾರ ಕಳ್ಳಿಗೆ, ಅಮ್ಟಾಡಿ, ಕುರಿಯಾಳ, ಅರಳ ಹಾಗೂ ಕೊಯಿಲ ಗ್ರಾಮಗಳಲ್ಲಿ ಯಾತ್ರೆ ಸಂಚರಿಸಲಿದ್ದು, ಸಂಜೆ ರಾಯಿ ಜಂಕ್ಷನ್ನಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 12 ರಂದು ಭಾನುವಾರ ಕರ್ಪೆ, ಸಂಗಬೆಟ್ಟು, ಕುಕ್ಕಿಪಾಡಿ, ಎಲಿಯನಡುಗೋಡು, ಚೆನ್ನೈತ್ತೋಡಿ, ಅಜ್ಜಿಬೆಟ್ಟು ಹಾಗೂ ಕೊಡಂಬೆಟ್ಟು ಗ್ರಾಮಗಳಲ್ಲಿ ಯಾತ್ರೆ ಸಂಚರಿಸಿ ಸಂಜೆ ವಾಮದಪದವು ಜಂಕ್ಷನ್ನಿನ್ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 13 ರಂದು ಸೋಮವಾರ ಇರ್ವತ್ತೂರು, ಪಿಲಾತಬೆಟ್ಟು, ಬಡಗಕಜೆಕಾರು ಹಾಗೂ ತೆಂಕಕಜೆಕಾರು ಗ್ರಾಮಗಳಲ್ಲಿ ಸಂಚರಿಸಲಿದ್ದು, ಸಂಜೆ ಪಾಂಡವರಕಲ್ಲು ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 14 ರಂದು ಮಂಗಳವಾರ ಉಳಿ, ಸರಪಾಡಿ, ದೇವಸ್ಯಮೂಡೂರು ಹಾಗೂ ಮಣಿನಾಲ್ಕೂರು ಗ್ರಾಮಗಳಲ್ಲಿ ಸಂಚರಿಸುವ ಪ್ರಜಾಧ್ವನಿ ಯಾತ್ರೆ ಸಂಜೆ ಮಾವಿನಕಟ್ಟೆ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 15 ರಂದು ಬುಧವಾರ ದೇವಸ್ಯಪಡೂರು, ನಾವೂರು, ಕಾಡಬೆಟ್ಟು, ಕಾವಳಪಡೂರು ಹಾಗೂ ಕಾವಳಮೂಡೂರು ಗ್ರಾಮಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಲಿದ್ದು, ಸಂಜೆ ಕಾವಳಕಟ್ಟೆ ಜಂಕ್ಷನ್ನಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 16 ರಂದು ಗುರುವಾರ ಮೂಡನಡುಗೋಡು, ಬುಡೋಳಿ, ಪಂಜಿಕಲ್ಲು ಹಾಗೂ ಬಂಟ್ವಾಳ ಕಸಬಾ ಗ್ರಾಮಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಲಿದ್ದು, ಲೊರೆಟ್ಟೊಪದವು ಜಂಕ್ಷನ್ನಿನಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 17 ರಂದು ಶುಕ್ರವಾರ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಲಿದ್ದು, ಮೆಲ್ಕಾರ್-ಬೋಗೋಡಿ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 18 ರಂದು ಶನಿವಾರ ಸಾಲೆತ್ತೂರು, ಕರೋಪಾಡಿ ಹಾಗೂ ಕನ್ಯಾನ ಗ್ರಾಮಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಾಗಿ ಬರಲಿದ್ದು, ಸಂಜೆ ಕನ್ಯಾನ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 19 ರಂದು ಭಾನುವಾರ ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಮಂಚಿ ಗ್ರಾಮಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಾಗಿ ಬರಲಿದ್ದು, ಸಂಜೆ ಕುಕ್ಕಾಜೆ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 20 ರಂದು ಸೋಮವಾರ ಸಜಿಪಮುನ್ನೂರು, ಅಮ್ಟೂರು ಹಾಗೂ ಸಜಿಪಮೂಡ ಗ್ರಾಮಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಾಗಲಿದ್ದು, ಸಂಜೆ ಬೊಳ್ಳಾಯಿ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 21 ರಂದು ಮಂಗಳವಾರ ಬೋಳಂತೂರು, ಗೋಳ್ತಮಜಲು ಹಾಗೂ ವೀರಕಂಭ ಗ್ರಾಮಗಳಲ್ಲಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಾಗಲಿದ್ದು, ಸಂಜೆ ಮಂಗಿಲಪದವು ಜಂಕ್ಷನ್ನಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 22 ರಂದು ಬುಧವಾರ ಅನಂತಾಡಿ, ನೆಟ್ಲಮುಡ್ನೂರು, ಪೆರಾಜೆ, ಕಡೇಶಿವಾಲಯ ಹಾಗೂ ಮಾಣಿ ಗ್ರಾಮಗಳಲ್ಲಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಾಗಲಿದ್ದು, ಸಂಜೆ ಮಾಣಿ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ 23 ರಂದು ಗುರುವಾರ ಬರಿಮಾರು, ಬಾಳ್ತಿಲ, ಶಂಭೂರು ಹಾಗೂ ನರಿಕೊಂಬು ಗ್ರಾಮಗಳಲ್ಲಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಂಚರಿಸಲಿದ್ದು, ಸಂಜೆ ಮೊಗರ್ನಾಡ್ ಜಂಕ್ಷನ್ನಿನಲ್ಲಿ ನಡೆಯುವ ಸಾರ್ವಜನಿಕ ಸಭಾ ಕಾರ್ಯಕ್ರಮದೊಂದಿಗೆ ಯಾತ್ರೆ ಸಂಪನ್ನಗೊಳ್ಳಲಿದೆ ಎಂದು ಯಾತ್ರೆಯ ಸಂಚಾಲಕ ಹಾಗೂ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ.
0 comments:
Post a Comment