ಬಂಟ್ವಾಳ, ಮಾರ್ಚ್ 16, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬೆಳ್ಳಿಪ್ಪಾಡಿಗುತ್ತು ರಮಾನಾಥ ರೈ ಅವರ ನೇತೃತ್ವದ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯು ಮಾರ್ಚ್ 17 ರಂದು ಶುಕ್ರವಾರ ಅಪರಾಹ್ನ 3 ಗಂಟೆಗೆ ಪಾಣೆಮಂಗಳೂರು ಗ್ರಾಮಕ್ಕೆ ಪ್ರವೇಶ ಪಡೆಯಲಿದ್ದು, ಈ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಪಾಣೆಮಂಗಳೂರು ಹಳೆ ಸೇತುವೆ ಬಳಿ ಅದ್ದೂರಿ ಸ್ವಾಗತ ಏರ್ಪಡಿಸಲಾಗಿದೆ. ಬಳಿಕ ಅಲ್ಲಿಂದ ಯಾತ್ರೆಯು ಜೈನರಪೇಟೆ, ಪಾಣೆಮಂಗಳೂರು ಪೇಟೆ, ಆಲಡ್ಕ, ಮೆಲ್ಕಾರ್ ಮಾರ್ಗವಾಗಿ ಸಂಚರಿಸಿ ಸಂಜೆ 6 ಗಂಟೆಗೆ ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ದಿನದ ಸಮಾಪ್ತಿ ಪ್ರಯುಕ್ತ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಅಲ್ಲದೆ ಪಾಣೆಮಂಗಳೂರು ಹಳೆ ಸೇತುವೆ ಬಳಿಯಿಂದ ಪಾಣೆಮಂಗಳೂರು ವಲಯ ಕಾಂಗ್ರೆಸ್ ವತಿಯಿಂದ ಬೈಕ್ ರ್ಯಾಲಿಯನ್ನೂ ಆಯೋಜಿಸಲಾಗಿದ್ದು, ಪಾಣೆಮಂಗಳೂರು ವಲಯ ಕಾಂಗ್ರೆಸ್ ವ್ಯಾಪ್ತಿಗೆ ಒಳಪಟ್ಟ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಜಿ ಸಚಿವರ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ ಮೊಹಮ್ಮದ್ ಇಕ್ಬಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment