ಪಾಣೆಮಂಗಳೂರು ಹಳೆ ಸೇತುವೆ ಬಳಿಯಿಂದ ಗುಡ್ಡೆಅಂಗಡಿವರೆಗೆ ಬೈಕ್ ರ್ಯಾಲಿ ಮೆರುಗು
ಬಂಟ್ವಾಳ, ಮಾರ್ಚ್ 17, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಮಾ 10 ರಂದು ಶುಕ್ರವಾರ ಚಾಲನೆಗೊಂಡ 14 ದಿನಗಳ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯು 7ನೇ ದಿನವಾದ ಮಾರ್ಚ್ 17 ರಂದು ಶುಕ್ರವಾರ (ಇಂದು) ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಲ್ಲಿ ಸಂಚರಿಸಲಿದ್ದು, ಸಂಜೆ ಮೆಲ್ಕಾರ್-ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಗಾರರಾಗಿ ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥ ಹಾಗೂ ಬರಹಗಾರ ಎಂ ಜಿ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ.
ಯಾತ್ರೆ ಪಾಣೆಮಂಗಳೂರು ಪ್ರವೇಶಿಸುವ ವೇಳೆ ಅಪರಾಹ್ನ 3 ಗಂಟೆಗೆ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ಬಳಿಯಿಂದ ಯುವಕರ ತಂಡ ಬೈಕ್ ರ್ಯಾಲಿ ಮೂಲಕ ರಮಾನಾಥ ರೈ ಅವರಿಗೆ ವಿಶೇಷ ಸ್ವಾಗತ ಕೋರುವ ಮೂಲಕ ಸಭಾ ಕಾರ್ಯಕ್ರಮದ ಸ್ಥಳದವರೆಗೂ ಬೈಕ್ ರ್ಯಾಲಿ ಮುಂದುವರಿಯಲಿದ್ದು, ಪರಿಸರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪಿ ಎಸ್ ಮೊಹಮ್ಮದ್ ಇಕ್ಬಾಲ್ ಹಾಗೂ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಪ್ರಕಟಣೆ ಮೂಲಕ ಕೋರಿದ್ದಾರೆ.
0 comments:
Post a Comment