ಬಂಟ್ವಾಳ, ಮಾರ್ಚ್ 16, 2023 (ಕರಾವಳಿ ಟೈಮ್ಸ್) : ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಕ್ಷೇತ್ರಕ್ಕೆ ಹರಿಸಿ ಅಭಿವೃದ್ದಿಗಳ ಹರಿಕಾರ ಎನಿಸಿಕೊಂಡಿರುವ ಮಾಜಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಈ ಬಾರಿ ಅಭ್ಯರ್ಥಿ ಬಿ ರಮಾನಾಥ ರೈಗಳ ರಾಜಕಾರಣದ, ಅಭಿವೃದ್ದಿ ಕೆಲಸದ ಉದ್ದೇಶ ಮತಗಳಿಕೆಯಲ್ಲ, ಬದಲಾಗಿ ಜನಸೇವೆಯ ಏಕಮಾತ್ರ ಉದ್ದೇಶ ಇಟ್ಟುಕೊಂಡು ರಾಜಕೀಯ ಪ್ರವೇಶ ಪಡೆದವರು ಅದೇ ಪ್ರಕಾರ ಚಾಚೂ ತಪ್ಪದೆ ನಡೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯವಾದಿ, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ ಹೇಳಿದರು.
ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 5ನೇ ದಿನ ಬುಧವಾರ (ಮಾ 15) ಕಾವಳಕಟ್ಟೆ-ಎನ್ ಸಿ ರೋಡು ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೋಡ್ಸೆ ಸಂತತಿಗಳಿಗೆ ರಾಜಕೀಯದಲ್ಲಿ ಜಾತಿ ಧರ್ಮ ವಿಭಜನೆಯ ವಿಷಯವಾದರೆ, ಗಾಂಧಿ ವಂಶಸ್ಥರಾದ ನಮಗೆ ಅಲ್ಲಾ ರಾಮ ಎಲ್ಲರೂ ಒಂದೇ. ಸೌಹಾರ್ದತೆ ಸಾರುವ ಮೂಲಕ ರಾಜಕೀಯ ಮಾಡುತ್ತೇವೆ ವಿನಃ ಜನರನ್ನು ವಿಭಜಿಸಿ ಅಲ್ಲ ಎಂದರು.
ಈ ಭಾಗದ ಕೇವಲ ಮೂರು ಪಂಚಾಯತ್ ಗಳಲ್ಲಿ ಸುಮಾರು 750 ಮಂದಿ ಬಡ ಕುಟುಂಬಗಳಿಗೆ 94ಸಿ-94ಸಿಸಿ ಹಕ್ಕುಪತ್ರ ದೊರಕಿಸಿಕೊಟ್ಟ ರೈಗಳು ನಿಜವಾದ ಜನನಾಯಕರು. ಸತ್ಯನಾರಾಯಣ ಸ್ವಾಮಿಯ ರಥದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಅಲ್ಲೂ ದ್ವೇಷ ಭಾಷಣ ಮಾಡುವ ಬಿಜೆಪಿಗರಿಗೆ ಜನರ ಹಿತ ಕಾಯುವ ನೈತಿಕತೆಯೇ ಉಳಿದಿಲ್ಲ. ಜಾದೂ ರಾಜಕೀಯ, ಗಿಲೀಟು ರಾಜಕೀಯ ಮಾಡುವುದು ಬಿಟ್ಟರೆ ಬಿಜೆಪಿಗರು ಮಾಡಿದ್ದು ಬರೇ ಶೂನ್ಯ ಎಂದರು.
ರಸ್ತೆ, ಚರಂಡಿ ವಿಷಯ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ರಾಜಕೀಯದಲ್ಲೂ ಮಕ್ಕಳಾಟಿಕೆ ಮೆರೆಯುವ, ಕೋಮುವಾದ ಭಾಷಣ ಮಾಡುವ ನಳಿನ್ ಕುಮಾರಗೆ ರಮಾನಾಥ ರೈಗಳ ಅಭಿವೃದ್ದಿ ವಿಚಾರ ಎಲ್ಲಿ ಅರ್ಥ ಆಗುತ್ತೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು ವಿಚಾರಗಳ ಮೇಲೆ, ಜನಪರ ವಿಷಯಗಳ ಮೇಲೆ ರಾಜಕಾರಣ ಮಾಡುವ ಪಕ್ಷ ಕಾಂಗ್ರೆಸ್. ದ್ಚೇಷ-ಅಸೂಯೆ ನಂಜಿನ ರಾಜಕೀಯ ಮಾಡುವ ಪಕ್ಷ ಬಿಜೆಪಿ ಎಂದರು ಕಿಡಿ ಕಾರಿದರು.
ಭೇಟಿ ಪಢಾವೋ ಭೇಟಿ ಬಚಾವೋ ಎಂಬ ಶ್ಲೋಗನ್ ಮೂಲಕ ಜನರೇ ಕೈಗೊಳ್ಳುವ ಕೆಲಸಕ್ಕೆ ಮೋದಿ ಫೆÇೀಟೋ ಹಾಕಿ ಬಿಜೆಪಿ ಕೇವಲ ಪ್ರಚಾರ ಪಡೆದುಕೊಂಡರೆ, ಕಾಂಗ್ರೆಸ್ ಕುಟುಂಬದ ಯಜಮಾನಿಗೆ 2000 ರೂಪಾಯಿ ಸಹಾಯಧನ ಘೋಷಿಸುವ ಮೂಲಕ ಹೆಣ್ಣು ಮಕ್ಕಳಿಗೆ ನಿಜವಾದ ಸ್ವಾಭಿಮಾನದ ಬದುಕು ಕಲ್ಪಿಸುವ ನೈಜ ಭರವಸೆ ನೀಡಿದೆ. ನುಡಿದಂತೆ ನಡೆಯುವ ಬದ್ದತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಕರಾವಳಿಗೆ ಬಿಜೆಪಿಯ ಕುಚ್ಚಲಕ್ಕಿ ಇನ್ನೂ ಸಮುದ್ರದಲ್ಲೇ ಅಡಗಿ ಕೂತಿದೆ. ಇದ್ದ ಅಕ್ಕಿಯನ್ನು ಕಡಿಮೆ ಮಾಡಿ ಇದೀಗ ಚುನಾವಣಾ ಹೊಸ್ತಿಲಲ್ಲಿ ಮತ್ತೆ ಒಂದು ಕೆಜಿ ಹೆಚ್ಚಿಸಿ ಕಣ್ಣಿಗೆ ಮಣ್ಣೆರಚುವ ತಂತ್ರದ ಹಿಂದೆ ಬಿದ್ದಿದೆ ಎಂದ ಸುಧೀರ್ ಕುಮಾರ್ ಅವರು, ಇದ್ದ ಆಸ್ತಿ ಕರಗಿಸಿ ಬಂಟ್ವಾಳದ ಅಭಿಮಾನ ಹೆಚ್ಚಿಸಿದ ಬಂಗಾರದ ಮನುಷ್ಯರಾಗಿದ್ದಾರೆ ರಮಾನಾಥ ರೈಗಳು. ಅಭಿವೃದ್ದಿಯ ಹರಿಕಾರ ರೈಗಳ ಕೊನೆ ಚುನಾವಣೆ ಇತಿಹಾಸವಾಗುವ ಅಂತರದಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ತಮ್ಮ ಪ್ರೀತಿಯನ್ನು ಧಾರೆ ಎರೆಯಿರಿ. ರೈಗಳ ಗೆಲುವು ಪ್ರಾಮಾಣಿಕತೆಯ ಗೆಲುವು, ಜನರ ಗೆಲುವು, ಪ್ರೀತಿಯ ಗೆಲುವು, ಸೌಹಾರ್ದತೆಯ ಗೆಲುವು, ಶಾಂತಿಯ ಗೆಲುವು ಆಗಿದೆ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ಬಿಜೆಪಿಗರಿಗೆ ಬಡವರಿಗೆ ಕಾಂಗ್ರೆಸ್ ಸಹಾಯ ಮಾಡುವುದರ ಬಗ್ಗೆ ಸದಾ ಚಿಂತೆ. ಅದಕ್ಕೆ ದುಡ್ಡು ಎಲ್ಲಿ ಎಂದು ಅವರ ಪ್ರಶ್ನೆ. ಆದರೆ ಕಾಂಗ್ರೆಸ್ ಪಕ್ಷ ಘೋಷಿಸಿದ ಕಾರ್ಯಕ್ರಮಕ್ಕೆ ದುಡ್ಡನ್ನು ಹೇಗಾದರೂ ಹೊಂದಿಸಿ ಜನರಿಗೆ ನೀಡಿದ ಭರವಸೆ ಈಡೇರಿಸಿಯೇ ಸಿದ್ದ ಎಂಬ ಛಲವಿದೆ. ಬಿಜೆಪಿಗರು ತಾವು ಹೇಗೆ ದುಡ್ಡನ್ನು ಬಾಚುವುದು ಎಂಬ ಚಿಂತೆಯಲ್ಲೇ ಕಾಲ ಕಳೆದರೆ ಕಾಂಗ್ರೆಸ್ ಬಡವರ ಏಳಿಗೆ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿ ಜನಪರ ರಾಜಕೀಯ ಮಾಡುತ್ತಿದೆ. ಬಡವರ ಪರ ಕಾರ್ಯಕ್ರಮ ಘೋಷಣೆ ಇದು ಕಾಂಗ್ರೆಸಿನಿಂದ ಮೊದಲೇನಲ್ಲ. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಬಡವರ ಪರ ಯೋಜನೆಗಳನ್ನು ಘೋಷಿಸುತ್ತಲೇ ಇದೆ. ಅದನ್ನು ಈಡೇರಿಸುತ್ತಲೂ ಇದೆ. ಮತ ಬರಲಿ, ಬರದೆ ಇರಲಿ. ಕಾಂಗ್ರೆಸ್ ಉದ್ದೇಶ ಬಡವರ ಏಳಿಯೇ ಹೊರತು ಮತಗಳಿಕೆಯಲ್ಲ ಎಂದು ಸಾರಿದರು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಜಿನರಾಜ್ ಅರಿಗ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಡಿಸಿಸಿ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಡಿಸಿಸಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಸುರೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪುರಸಭಾ ಸದಸ್ಯರಾದ ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ವಿ ಕೋಟ್ಯಾನ್, ಚಂದ್ರಶೇಖರ ಕರ್ಣ, ಬಾಲಕೃಷ್ಣ ಅಂಚನ್, ಪಂಚಾಯತ್ ಅಧ್ಯಕ್ಷರಾದ ಯು ಉಮೇಶ್ ಕುಲಾಲ್, ರಜನಿ ಮೂಲ್ಯ, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಸದಸ್ಯರಾದ ಸುವರ್ಣ ಕುಮಾರ್ ಜೈನ್, ಫಾರೂಕ್, ಯೋಗೀಶ್ ಬಂಗೇರಾ, ಲವೀನಾ ಶಾಂತಿ ಡಿಸೋಜ, ಮುಹಮ್ಮದ್ ಎಂ, ಸುರೇಶ್ ಪೂಜಾರಿ, ಅಬ್ದುಲ್ ರಝಾಕ್, ವೀರೇಂದ್ರ ಅಮೀನ್, ಲಕ್ಷ್ಮೀನಾರಾಯಣ, ಶರ್ಮ, ಪುಷ್ಪ, ಲೀನಾ ರೋಡ್ರಿಗಸ್, ಶೋಮಲ್ ಲೋಬೋ, ಅಬ್ದುಲ್ ಹನೀಫ್, ಉದಯ ಪೂಜಾರಿ, ಮುಸ್ತಫಾ, ಪ್ರಭಾಕರ್ ಅಮೀನ್, ಜನಾರ್ದನ, ಮಾಣಿಕ್ ರಾಜ್, ತನ್ವೀರ್ ತಾಹಾ, ಅಬ್ದುಲ್ ಖಾದರ್ ಸಲಿ, ಮೊಹಮ್ಮದ್ ಶರೀಫ್, ಪ್ರಮುಖರಾದ ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ವೆಂಕಪ್ಪ ಪೂಜಾರಿ, ವಿಜಯ ಅಲ್ಲಿಪಾದೆ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಸಂಜಿತ್ ಪೂಜಾರಿ, ತಿಲಕ್ ಮಂಚಿ, ಅಲ್ತಾಫ್ ಸಂಗಬೆಟ್ಟು, ತ್ರಿಶಾಲಾ ಸುವರ್ಣ ಕುಮಾರ್ ಜೈನ್, ಬೇಬಿ ಸುವರ್ಣ, ಗಿರಿಜಾ ಕೃಷ್ಣಪ್ಪ, ಸುನೀತಾ ರೋಡ್ರಿಗಸ್, ಕಿಶೋರ್, ಸತೀಶ್, ಆಸಿಫ್, ಮುಸ್ತಫ ಪಲ್ಲಿಗುಡ್ಡೆ, ರಹೀಂ ಮೈಂದಾಳ, ಚಂದ್ರಕಾಂತ, ಮಹಾಬಲ ನಾಯಕ್, ಪ್ರಸಾದ್, ದಿನೇಶ್ ಕುಮಾರ್, ಜೋಯ್ ವಾಲ್ಟರ್ ಡಿಸೋಜ, ಪ್ರವೀಣ್ ವಾಲ್ಟರ್ ಡಿಸೋಜ, ಸುಲೈಮಾನ್ ಮೈಂದಾಳ, ಯೂಸುಫ್ ಮೈಂದಾಳ, ಸಂತೋಷ್ ಪೂಜಾರಿ ಕುಳಾಲ್, ಶ್ರೀನಿವಾಸ್, ಲವಣ್, ಲಕ್ಷ್ಮಣ್ ಕುಲಾಲ್ ಅಗ್ರಹಾರ ಬೀದಿ, ಸುಮಿತ್ರಾ ಮೋಹನ್ ಅಲ್ಲಿಪಾದೆ, ಕೊಗ್ಗಣ್ಣ, ಪ್ರಭಾಕರ ಆಚಾರ್ಯ, ಪುರುಷೋತ್ತಮ ಬಂಗೇರ, ರಾಜೇಶ್ ಪಾದೆಕೋಡಿ, ವಿನೋದ್ ಕುಂಟಾಲಪಲ್ಕೆ, ಸದಾನಂದ ನಾವೂರು, ವಾಸು ಪೂಜಾರಿ ನಾವೂರು, ಸದಾನಂದ ಶೆಟ್ಟಿ ಇಚ್ಚಿಲಗುತ್ತು, ಇಸ್ಮಾಯಿಲ್, ಸಿದ್ದೀಕ್, ಸತೀಶ್, ಪುರುಷೋತ್ತಮ, ಖಲೀಲ್ ಎನ್ ಸಿ ರೋಡು, ಯಾಕೂಬ್ ಸಾಹೇಬ್, ಶಿಫನ್ ಕಾವಳಕಟ್ಟೆ, ಚಂದ್ರಹಾಸ, ವಸಂತ ಶೆಟ್ಟಿ, ಜನಾರ್ದನ ಆಚಾರ್ಯ, ಪ್ರಭಾಕರ ಆಚಾರ್ಯ, ವಸಂತ ಶೆಟ್ಟಿ, ಗಫಾರ್ ಸಾಹೇಬ್ ಕಾವಳಕಟ್ಟೆ, ಸಾಲಿಯಾ ಕಾವಳಕಟ್ಟೆ, ಉಮ್ಮರ್ ಶರೀಫ್, ಅರುಣ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment