ರೈಗಳು ಧರಿಸಿರುವ ಬಟ್ಟೆ ಶುಭ್ರವಾಗಿರುವಷ್ಟೆ ವ್ಯಕ್ತಿತ್ವ ಕೂಡ ಪರಿಶುದ್ದವಾಗಿದೆ ಎಂಬುದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿಮಾನ, ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರಿಶುದ್ದತೆ ಬಗ್ಗೆ ಹೇಳಿಕೊಳ್ಳುವ ಧೈರ್ಯವಿದೆಯೇ : ಅಮೃತ ಶೆಣೈ ಪ್ರಶ್ನೆ - Karavali Times ರೈಗಳು ಧರಿಸಿರುವ ಬಟ್ಟೆ ಶುಭ್ರವಾಗಿರುವಷ್ಟೆ ವ್ಯಕ್ತಿತ್ವ ಕೂಡ ಪರಿಶುದ್ದವಾಗಿದೆ ಎಂಬುದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿಮಾನ, ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರಿಶುದ್ದತೆ ಬಗ್ಗೆ ಹೇಳಿಕೊಳ್ಳುವ ಧೈರ್ಯವಿದೆಯೇ : ಅಮೃತ ಶೆಣೈ ಪ್ರಶ್ನೆ - Karavali Times

728x90

20 March 2023

ರೈಗಳು ಧರಿಸಿರುವ ಬಟ್ಟೆ ಶುಭ್ರವಾಗಿರುವಷ್ಟೆ ವ್ಯಕ್ತಿತ್ವ ಕೂಡ ಪರಿಶುದ್ದವಾಗಿದೆ ಎಂಬುದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿಮಾನ, ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರಿಶುದ್ದತೆ ಬಗ್ಗೆ ಹೇಳಿಕೊಳ್ಳುವ ಧೈರ್ಯವಿದೆಯೇ : ಅಮೃತ ಶೆಣೈ ಪ್ರಶ್ನೆ

ಬಂಟ್ವಾಳ, ಮಾರ್ಚ್ 21, 2023 (ಕರಾವಳಿ ಟೈಮ್ಸ್) : ಬ್ರಿಟಿಷರು ಕಾಂಗ್ರೆಸ್ ಪಕ್ಷ ಜವಾಹರ್ ಲಾಲ್ ನೆಹರು  ಕೈಗೆ ಸಮೃದ್ದ ಭಾರತವನ್ನು ನೀಡಿರಲಿಲ್ಲ. ಆದರೆ ಬಡ ಭಾರತವನ್ನು ಸಮೃದ್ದ ಭಾರತವಾಗಿ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಅಮೃತ ಶೆಣೈ ಹೇಳಿದರು.

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 11ನೇ ದಿನ ಸೋಮವಾರ (ಮಾ 20) ಬೊಳ್ಳಾಯಿ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ ಬಳಿಕ ಬ್ಲೂಜೆಪಿ ಆಗಿ ಬದಲಾದ ಬಿಜೆಪಿ ನಂತರ ಎಲ್ಲಾ ಮಾಡಬಾರದ ಕೆಲಸಗಳನ್ನೂ ಮಾಡಿದೆ. ಮಂಚದ ಮೇಲೆ ಬಂದ ಸರಕಾರ ಮಾಡಿದ್ದು ಬರೀ ಲಂಚದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರೈಗಳ ಬಟ್ಟೆ ಎಷ್ಟು ಬಿಳಿಯಾಗಿ ಶುಭ್ರವಾಗಿದೆಯಾ ಅಷ್ಟೇ ಬಿಳಿ ಹಾಗೂ ಶುಭ್ರವಾಗಿದೆ ಅವರ ವ್ಯಕ್ತಿತ್ವ ಕೂಡಾ. ಇದನ್ನು ಕಾಂಗ್ರೆಸ್ಸಿಗರು ಅಭಿಮಾನದಿಂದ ಹೇಳಿಕೊಳ್ಳುವ ಭಾಗ್ಯ ಪಡೆದಿದ್ದಾರೆ. ಆದರೆ ಬಿಜೆಪಿಗರು ಈ ರೀತಿಯಾಗಿ ಯಾವುದೇ ತಮ್ಮ ನಾಯಕರ ಬಗ್ಗೆಯಾದರೂ ಹೇಳಿಕೊಳ್ಳುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದ ಅಮೃತ ಶೆಣೈ ಬಿಜೆಪಿ ಎಂಬುದು ವಾಷಿಂಗ್ ಮೆಷಿನ್ ಇದ್ದ ಹಾಗೆ. ಎಲ್ಲೇ ಇರುವ ಕಡು ಭ್ರಷ್ಟರನ್ನು ಎಳೆದುಕೊಂಡು ಶುಭ್ರ ಸರ್ಟಿಫಿಕೇಟ್ ಕೊಟ್ಟು ಹೊರಗೆ ಬಿಡುತ್ತಾರೆ ಎಂದು ಟೀಕಿಸಿದರು. 

ರಾಜಕೀಯ ಲಾಭ ಇರುವ ಕೊಲೆಗಳಿಗೆ ಬಣ್ಣ ಹಚ್ವಿ ಕಣ್ಣೀರು ಹರಿಸುವ ಪಕ್ಷ ಬಿಜೆಪಿ. ಎಲ್ಲಿಯಾದರೂ ಬಿಜೆಪಿ ನಾಯಕರ ಮಕ್ಕಳು ಹಿಂದುತ್ವದ ಹೆಸರಿನಲ್ಲಿ ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರಾ? ಯಾರ ಮಕ್ಕಳಿಗೂ ತ್ರಿಶೂಲ ದೀಕ್ಷೆಯಾಗಲೀ, ಗಲಭೆಯಲ್ಲಿ ಭಾಗವಹಿಸಿದ ಉದಾಹರಣೆಯಾಗಲೀ ಇಲ್ಲ. ಎಲ್ಲ ನಾಯಕರ ಮಕ್ಕಳು ಕೂಡಾ ಅಮೇರಿಕಾ, ಲಂಡನ್ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಪಾಶ್ಚಾತ್ಯ ಸಂಸ್ಕøತಿಗೆ ಹೊಂದಿಕೊಂಡು ಆರಾಮವಾಗಿ ಬದುಕುತ್ತಿರುವುದು ಕಾಣುತ್ತೇವೆ. ಆದರೆ ಇಲ್ಲಿ ಹಿಂದುಳಿದ ವರ್ಗದ ಬಡ ಮಕ್ಕಳು ಮಾತ್ರ ಹಿಂದುತ್ವ ಹೆಸರಿನಲ್ಲಿ ಕೇಸು, ಜೈಲು, ಹತ್ಯೆಗಳಂತಹ ಘಟನೆಗಳಲ್ಲಿ ಭಾಗಿಯಾಗಿ ಯಾರದೋ ರಾಜಕೀಯ ಸ್ವಾರ್ಥಕ್ಕಾಗಿ ತಮ್ಮ ಭವಿಷ್ಯವನ್ನು ಸುಟ್ಟುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. 

ಚಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿ ಆಗಿದ್ದಾರೆಂದರೆ ಅದು ಮೋದಿ ಚಮತ್ಕಾರ ಅಲ್ಲ. ಬದಲಾಗಿ ಕಾಂಗ್ರೆಸ್ ದೇಶಕ್ಕೆ ಕೊಟ್ಟ ಸಂವಿಧಾನದ ಪವರ್ ಆಗಿದೆ ಎಂದ ಅಮೃತ ಶೆಣೈ ಇಂದು ದರ್ಮ ಗ್ರಂಥಗಳ ಧಾರ್ಮಿಕತೆ ಜನರಲ್ಲಿ ಉಳಿದಿಲ್ಲ. ವಾಟ್ಸಪ್ ಮೂಲಕ ಬರುವ ಧರ್ಮ ಸಂದೇಶಗಳೇ ಇಂದು ಯುವಕರಿಗೆ ಸರ್ವಸ್ವವಾಗಿರುವುದೇ ಎಲ್ಲ ಧಾರ್ಮಿಕ ಸಂಘರ್ಷಗಳಿಗೂ ಪ್ರಮುಖ ಕಾರಣವಾಗಿದೆ ಎಂದು ವಿಷಾದಿಸಿದರು. 

ಕಾಂಗ್ರೆಸ್ ಸರಕಾರಗಳು ನೀಡಿದ ಯೋಜನೆಗಳ ಫಲ ಉಣ್ಣುತ್ತಲೇ ಕಾಂಗ್ರೆಸ್ ಹಿಂದೂ ವಿರೋಧಿ ಅನ್ನುತ್ತಿರುವ ಬಿಜೆಪಿಗರ ಪಾಪದ ಕೊಡ ತುಂಬಿದೆ ಎಂದ ಅಮೃತ ಶೆಣೈ ಕಾಂಗ್ರೆಸ್ ಪಕ್ಷವಾಗಲೀ, ಅದರ ನಾಯಕರಾಗಲೀ ಯಾವತ್ತೂ ಈ ದೇಶದ ಜನ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಜನಪರ-ಬಡವರ ಪರ ಯೋಜನೆಗಳಷ್ಟೆ ಕಾಂಗ್ರೆಸ್ ಕೈಗೊಂಡಿದ್ದು, ಜನರ ಏಳಿಗೆಯನ್ನೇ ಬಯಸಿದ ಪಕ್ಷ ಕಾಂಗ್ರೆಸ್. ಹೀಗಿರುತ್ತಾ ಕಾಂಗ್ರೆಸ್ ಕಾರ್ಯಕರ್ತರು ಎದೆಯುಬ್ಬಿಸಿ ಜನರ ಮುಂದೆ ಹೋಗಿ ಮತಯಾಚನೆ ಮಾಡಿ ಪಕ್ಷದ ಅಭ್ಯರ್ಥಿಗಳ ಜಯಕ್ಕೆ ಕಾರಣರಾಗಬೇಕು ಎಂದು ಕರೆ ನೀಡಿದರು. 


ಅತ್ಯಾಚಾರ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್ ಗಾಂಧಿಗೆ ನೋಟೀಸ್ ಇಶ್ಯೂ ಮಾಡುವಷ್ಟು ರಾಜಕೀಯ ದ್ವೇಷಮಯಗೊಂಡಿದೆ, ಇದು ದುಃಖದ ಸಂಗತಿ : ರೈ 


ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ದೇಶದಲ್ಲಿ ಅತ್ಯಾಚಾರ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಭಾಷಣದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ರಾಹುಲ್ ಗಾಂಧಿಗೆ ನೋಟೀಸು ನೀಡುವಷ್ಟರ ಮಟ್ಟಿಗೆ ರಾಜಕೀಯ ದ್ವೇಷ ಬೆಳೆದು ಬರುತ್ತಿರುವುದು ಅತ್ಯಂತ ದುಃಖದ ವಿಚಾರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಸುದೀರ್ಘ ಅವಧಿಯ ರಾಜಕೀಯ ನಡೆಸಿದ್ದು, 13 ವರ್ಷಗಳ ಕಾಲ ಮಂತ್ರಿಗಿರಿ ಪಡೆದುಕೊಂಡಿದ್ದರೂ ಎಲ್ಲಿಯೂ ಅಣುವಿನಷ್ಟು ಭ್ರಷ್ಟಾಚಾರವಾಗಲೀ, ಜನರಿಗೆ ದ್ರೋಹ-ಕಳಂಕ ತರುವ ಕೆಲಸವನ್ನಾಗಲೀ ಮಾಡದೆ ಕಳಂಕ ರಹಿತ ರಾಜಕೀಯ ನಡೆಸಿರುವುದು ಕ್ಷೇತ್ರ ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಕೊನೆಯ ಬಾರಿಗೆ ಮತ್ತೊಂದು ಅವಕಾಶ ನೀಡಿ ಕ್ಷೇತ್ರಲ್ಲಿ ಬಾಕಿಯಾಗಿರುವ ಕನಸಿನ ಯೋಜನೆಗಳ ಸಹಿತ ಇನ್ನಷ್ಟು ಜನರಿಗೆ ಹಿತಕರ ಹಾಗೂ ಪೂರಕವಾದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡರು. 

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಪದ್ಮನಾಭ ಸಾಮಂತ್ ಅವರಿಗೆ ಮಾಜಿ ಸಚಿವ ರಮಾನಾಥ ರೈ ಅವರು ಹಿಂದುಳಿದ ವರ್ಗಗಳ ಘಟಕಾಧ್ಯಕ್ಷ ವಿಶ್ವಾಸದಾಸ್ ಅವರ ಸಮ್ಮುಖದಲ್ಲಿ ನೇಮಕ ಪತ್ರ ಹಸ್ತಾಂತರಿಸಿದರು. 

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ಹಸೈನಾರ್ ತಾಳಿಪಡ್ಪು, ಲುಕ್ಮಾನ್ ಬಿ ಸಿ ರೋಡು, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಂಜೀವ ಪೂಜಾರಿ ಬೊಳ್ಳಾಯಿ, ನಸೀಮಾ ಬೇಗಂ, ದೇವಿಪ್ರಸಾದ್ ಪೂಂಜಾ, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ಕೆ ಪದ್ಮನಾಭ ರೈ, ರಮೇಶ ಪಣೋಲಿಬೈಲು, ಪಿ ಎ. ರಹೀಂ ಬಿ ಸಿ ರೋಡು, ಶರೀಫ್ ಆಲಾಡಿ, ಶರೀಫ್ ನಂದಾವರ, ಆರಿಫ್ ನಂದಾವರ, ಮೋನು ನಂದಾವರ, ವಿಶ್ವಾಸದಾಸ್, ಸ್ಟೀವನ್ ಡಿಸೋಜ, ಸಿದ್ದೀಕ್ ಸರವು, ಜಿ ಎಂ ಇಬ್ರಾಹಿಂ ಮಂಚಿ, ಬದ್ರುದ್ದೀನ್ ಕೆಯ್ಯೂರು, ಪ್ರವೀಣ್ ರೋಡ್ರಿಗಸ್ ವಗ್ಗ, ಆಲ್ಬರ್ಟ್ ಮೆನೆಜಸ್, ವೆಂಕಪ್ಪ ಪೂಜಾರಿ, ಅಬ್ದುಲ್ ಅಝೀಝ್ ಬೊಳ್ಳಾಯಿ, ಐಡಾ ಸುರೇಶ್, ಫ್ಲೋಸಿ ಡಿಸೋಜ, ನಿಯಾಝ್ ಫಜೀರ್, ಬಿ ಮೋಹನ್, ಶಾರೂಕ್ ಬೊಳ್ಳಾಯಿ, ಬಶೀರ್ ಕಾರಾಜೆ, ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ರೈಗಳು ಧರಿಸಿರುವ ಬಟ್ಟೆ ಶುಭ್ರವಾಗಿರುವಷ್ಟೆ ವ್ಯಕ್ತಿತ್ವ ಕೂಡ ಪರಿಶುದ್ದವಾಗಿದೆ ಎಂಬುದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿಮಾನ, ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರಿಶುದ್ದತೆ ಬಗ್ಗೆ ಹೇಳಿಕೊಳ್ಳುವ ಧೈರ್ಯವಿದೆಯೇ : ಅಮೃತ ಶೆಣೈ ಪ್ರಶ್ನೆ Rating: 5 Reviewed By: karavali Times
Scroll to Top