ಬಿಜೆಪಿಯ ತಪ್ಪು ನೀತಿಯಿಂದ ಸೊರಗಿದ ಜನತೆಗೆ ಸಾಂತ್ವನಕ್ಕಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದೆ, ಅದನ್ನು ಈಡೇರಿಸಲಿದೆ ಕೂಡ : ಸವಿತಾ ರಮೇಶ್ - Karavali Times ಬಿಜೆಪಿಯ ತಪ್ಪು ನೀತಿಯಿಂದ ಸೊರಗಿದ ಜನತೆಗೆ ಸಾಂತ್ವನಕ್ಕಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದೆ, ಅದನ್ನು ಈಡೇರಿಸಲಿದೆ ಕೂಡ : ಸವಿತಾ ರಮೇಶ್ - Karavali Times

728x90

19 March 2023

ಬಿಜೆಪಿಯ ತಪ್ಪು ನೀತಿಯಿಂದ ಸೊರಗಿದ ಜನತೆಗೆ ಸಾಂತ್ವನಕ್ಕಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದೆ, ಅದನ್ನು ಈಡೇರಿಸಲಿದೆ ಕೂಡ : ಸವಿತಾ ರಮೇಶ್

 ಬಂಟ್ವಾಳ, ಮಾರ್ಚ್ 20, 2023 (ಕರಾವಳಿ ಟೈಮ್ಸ್) : ಬಿಜೆಪಿ ಸರಕಾರದ ಅವೈಜ್ಞಾನಿಕ ನೀತಿಯಿಂದ ಸೊರಗಿದ ಜನತೆಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದೆ. ಅದನ್ನು ಸರಕಾರ ಬಂದ ತಕ್ಷಣ ಈಡೇರಿಸುವ ಮೂಲಕ ಜನರ ಸಂಕಷ್ಟಕ್ಕೆ ಕಾಂಗ್ರೆಸ್ ಸ್ಪಂದಿಸಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಭರವಸೆ ನೀಡಿದರು. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 10ನೇ ದಿನ ಭಾನುವಾರ (ಮಾ 19) ಕುಕ್ಕಾಜೆ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಆರೆಸ್ಸೆಸ್ ಪ್ರೇರಿತ ಕೋಮುವಾದ ಹೊರಗಿಟ್ಟು ಬಿಜೆಪಿ ನಾಯಕರು ತಾಕತ್ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆ ಹೇಳಿ ಮತ ಪಡೆದು ನೋಡಿ ಎಂದು ಸವಾಲು ಹಾಕಿದರು. 

ರೈಗಳ ಸಾಧನೆಯ ಪಟ್ಟಿ ಭಾಷಣದಲ್ಲಿ ಉಲ್ಲೇಖಿಸಲು ಮಾತ್ರ ಸೀಮಿತವಾಗದೆ ಅವರ ವಿರುದ್ದ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಲು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಶಕ್ತರಾಗಬೇಕು ಎಂದು ಕರೆ ನೀಡಿದ ಅವರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಶತಸ್ಸಿದ್ದ. ಈ ಕ್ಷೇತ್ರದ, ಈ ಜಿಲ್ಲೆಯ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೈಗಳು ಆ ಸರಕಾರದಲ್ಲಿ ಮಂತ್ರಿಯಾಗಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಜವಾಬ್ದಾರಿ ಅರಿತುಕೊಂಡು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡಾ ಆಹೋರಾತ್ರಿ ಶ್ರಮಿಸಬೇಕಾಗಿದೆ ಎಂದರು. 


ಕಾಂಗ್ರೆಸ್ ಬಡವರಿಗೆ ಯೋಜನೆ ಪ್ರಕಟಿಸಿದರೆ, ಅದಕ್ಕೆ ದುಡ್ಡು ಹೊಂದಿಸುವ ಚಿಂತೆ ಮಾತ್ರ ಬಿಜೆಪಿಗೆ : ರೈ ಲೇವಡಿ 


ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ನಾನು ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಬೇನಾವಿ ಆಸ್ತಿ-ಅಂತಸ್ತು ಸಂಪಾದಿಸಿಲ್ಲ. ಕ್ಷೇತ್ರದ ಜನರ ಪ್ರೀತಿ ಸ್ನೇಹವೇ ನಾನು ಸಂಪಾದಿಸಿದ ಆಸ್ತಿ ಎಂದರಲ್ಲದೆ ಬಡವರಿಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡರೆ ಅದಕ್ಕೆ ದುಡ್ಡು ಹೇಗೆ ಹೊಂದಿಸುತ್ತಾರೆ ಎಂಬ ಚಿಂತೆ ಬಿಜೆಪಿಗರಿಗೆ. ನಮ್ಮ ಆಶ್ವಾಸನೆ ಏನಿದ್ದರೂ ಈಡೇರಿಸುವಂತದ್ದು ಮಾತ್ರ.. ಬಿಜೆಪಿಯ ಹದಿನೈದು ಲಕ್ಷ, ಕಪ್ಪುಹಣ ತರುವಂತಹ ಆಕಾಶಕ್ಕೆ ಏಣಿ ಇಡುವ ಯಾವುದೇ ಭರವಸೆ ಕಾಂಗ್ರೆಸ್ ಪಕ್ಷ ನೀಡುವುದಿಲ್ಲ. ಈ ಬಗ್ಗೆ ಯಾರಿಗೂ ಚಿಂತೆ ಬೇಡ ಎಂದು ಗುಡುಗಿದರು. 

ಬಡವರ ಮಕ್ಕಳನ್ನು ಕೂಡಾ ಇಂಜಿನಿಯರ್ ಡಾಕ್ಟರ್ ಮಾಡುವ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ ಸಿಇಟಿ ಜಾರಿಗೆ ತರುವ ಮೂಲಕ. ರೈತರಿಗೆ ಉಚಿತ ವಿದ್ಯುತ್, ಸಾಲಮನ್ನಾ ಇದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದ್ದು, ಸಿದ್ದು ಸರಕಾರದ ಯುಗ ಕರ್ನಾಟಕದ ಸುವರ್ಣ ಯುಗ ಎಂದು ಬಣ್ಣಿಸಿದರು. 

ನಾನೇನಾದರೂ ರಾಜಕೀಯದಲ್ಲಿ ಕೋಟ್ಯಂತರ ರೂಪಾಯಿ ಹಣ ಮಾಡಿದ್ರೆ ನನಗೆ ಚುನಾವಣೆ ಕಷ್ಟವೇ ಇರಲಿಲ್ಲ. ಬೇಕಾ ಬಿಟ್ಟಿ ಹಣ ಹಂಚಿ ಚುನಾವಣೆ ಗೆಲ್ತಿದ್ದೆ. ಆದರೆ ಅದನ್ನು ನಾನು ಮಾಡಲಿಲ್ಲ. ಅದರಿಂದ ನನಗೆ ಹೃದಯ ಸಂತೋಷ ಇದೆ ಎಂದ ರಮಾನಾಥ ರೈ 94 ಸಿ ಹಕ್ಕುಪತ್ರ ರಾಜ್ಯದಲ್ಲೇ ಮೊದಲ ಬಾರಿಗೆ ನೀಡಿದ್ದು ಬಂಟ್ವಾಳದಲ್ಲಿ. ಕಮಿಷನ್ ಪರ್ಸೆಂಟೇಜ್ ರಾಜಕೀಯ ನಾನು ಯಾವತ್ತೂ ಮಾಡಿಲ್ಲ. ಜನಸೇವೆಯ ರಾಜಕೀಯ ಮಾತ್ರ ಮಾಡಿದ್ದೇನೆ. ಇದನ್ನು ಹೃದಯಮುಟ್ಟಿ ನೆನಪಿಸಿ ನನ್ನ ಈ ಒಂದು ಕೊನೆಯ ಚುನಾವಣೆಯಲ್ಲಿ ಈ ಬಾರಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. 

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಬ್ದುಲ್ ರಹಿಮಾನ್, ಕೆ ಪದ್ಮನಾಭ ರೈ, ರಮೇಶ ಪಣೋಲಿಬೈಲು, ಪಿ ಎ. ರಹೀಂ ಬಿ ಸಿ ರೋಡು, ಸಿದ್ದೀಕ್ ಸರವು, ಜಿ ಎಂ ಇಬ್ರಾಹಿಂ ಮಂಚಿ, ಬದ್ರುದ್ದೀನ್ ಕೆಯ್ಯೂರು, ಪ್ರವೀಣ್ ರೋಡ್ರಿಗಸ್ ವಗ್ಗ, ಆಲ್ಬರ್ಟ್ ಮೆನೆಜಸ್, ನಜೀಬ್ ಮಂಚಿ, ಡೆಂಝಿಲ್ ನೊರೊನ್ಹಾ, ಸಂಜಿತ್ ಪೂಜಾರಿ, ತಿಲಕ್ ಮಂಚಿ, ವೆಂಕಪ್ಪ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಯ ತಪ್ಪು ನೀತಿಯಿಂದ ಸೊರಗಿದ ಜನತೆಗೆ ಸಾಂತ್ವನಕ್ಕಾಗಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆಗಳನ್ನು ನೀಡಿದೆ, ಅದನ್ನು ಈಡೇರಿಸಲಿದೆ ಕೂಡ : ಸವಿತಾ ರಮೇಶ್ Rating: 5 Reviewed By: karavali Times
Scroll to Top