ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ 3ನೇ ದಿನ ಮಂಗಳವಾರ (ಮಾ 13) ಪಾಂಡವರಕಲ್ಲು ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಅತೀ ದೊಡ್ಡ ಜಾತ್ಯಾತೀತ ಪಕ್ಷ ಕಾಂಗ್ರೆಸ್ ಆಗಿದ್ದು, ದೇಶದ ಎಲ್ಲಾ ವರ್ಗದ ಜನರಿಗೂ ಸಮಾನವಾಗಿ ಅವಕಾಶ ಒದಗಿಸಿ, ಎಲ್ಲರ ಶ್ರೇಯೋಭಿವೃದ್ದಿ ಬಯಸುವ ಏಕೈಕ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಅದೇ ರೀತಿ ಬಂಟ್ವಾಳದ ಸುದೀರ್ಘ ಅವಧಿಯ ಶಾಸಕ, ಮಾಜಿ ಸಚಿವ ಬಿ ರಮಾನಾಥ ರೈ ಅವರು ಅತ್ಯಂತ ದೊಡ್ಡ ದೈವಭಕ್ತರಾಗಿದ್ದು, ಅವರನ್ನು ಹಿಂದೂ ವಿರೋಧಿ ಎಂದು ಒಂದು ಬಾರಿ ಅಪಪ್ರಚಾರ ನಡೆಸಿ ಸೋಲಿಸುವಲ್ಲಿ ಬಿಜೆಪಿಗರು ಸಫಲರಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಅದು ಸಾಧ್ಯವಿಲ್ಲ. ಜನ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ರಮಾನಾಥ ರೈ ಹಾಗೂ ಬಿಜೆಪಿ ಶಾಸಕರು, ಮಂತ್ರಿಗಳ ನಡುವೆ ಇರುವ ವ್ಯತ್ಯಾಸವನ್ನು ತೂಗಿ ಅಳೆದು ನೋಡಿ ಆಗಿದೆ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ವೈಯುಕ್ತಿಕವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸುದೀರ್ಘ ರಾಜಕೀಯ ಮಾಡಿದ್ದೇನೆ. ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ. ಕ್ಷೇತ್ರದ ಜನ ಹಾಗೂ ಈ ರಾಜ್ಯದ ಜನರಿಗೆ ಅವಮಾನವಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ಇದನ್ನು ಜನ ಅರ್ಥ ಮಾಡಿಕೊಂಡು ಈ ಬಾರಿ ನನ್ನ ಕೊನೆಯ ಅಸೆಂಬ್ಲಿ ಚುಣಾವಣೆಯಲ್ಲಿ ಮತ್ತೊಮ್ಮೆ ಆರಿಸಿ ಕಳುಹಿಸದಲ್ಲಿ ಕಳೆದ ಬಾರಿ ಮಾಡಿದ್ದಕ್ಕಿಂತ ದುಪ್ಪಟ್ಟು ಅನುದಾನ ತಂದು ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತೇನೆ. ಚುನಾವಣೆಗೆ ಇರುವ ಕೆಲವು ದಿನ ನೀವೆಲ್ಲರೂ ನನಗಾಗಿ ದಣಿವರಿಯದೆ ಕೆಲಸ ಮಾಡಿ, ಮುಂದಿನ ಐದು ವರ್ಷ ನಾನು ನಿಮಗೆಲ್ಲರಿಗಾಗಿ ದಣಿವರಿಯದೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ರಾಜೀವ್ ಶೆಟ್ಟಿ ಎಡ್ತೂರು, ಮಾಯಿಲಪ್ಪ ಸಾಲಿಯಾನ್, ಬಿ ಎಂ ಅಬ್ಬಾಸ್ ಅಲಿ, ಪಿ ಎ ರಹೀಂ, ಪ್ರವೀಣ್ ರೋಡ್ರಿಗಸ್ ವಗ್ಗ, ಸತೀಶ್ಚಂದ್ರ ಹೊಸಮನೆ, ಬಿ ಅಬ್ದುಲ್ಲ, ಜಯ ಬಂಗೇರ, ಸುಧಾಕರ್ ಶೆಣೈ ಖಂಡಿಗ, ಅಸ್ಮಾ ಅಝೀಝ್, ಡೀಕಯ್ಯ ಬಂಗೇರ, ಬಾಲಾಜಿ ರಾವ್, ಪ್ರಶಾಂತ್ ಜೈನ್, ರಕ್ಷಿತಾ, ಮೋಹಿನಿ, ಜೋನ್ ಸಿಕ್ಷೇರಾ, ವಸಂತ ಮಿತ್ತೋಟು, ಮೋಹನ್ ಸಾಲ್ಯಾನ್, ಸುಧೀರ್ ಶೆಟ್ಟಿ, ಪ್ರಶಾಂತ್ ಕೋಟ್ಯಾನ್, ನೆಲ್ವಿಸ್ಟರ್ ಪಿಂಟೋ, ಸುಚಿತ್ರ ಶೆಟ್ಟಿ, ಲವೀನಾ ಮೊರಾಸ್, ಎಸ್ ಪಿ ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಬಡಗಕಜೆಕಾರು ಗ್ರಾ ಪಂ ಉಪಾಧ್ಯಕ್ಷ ಬಿ ಕೆ ಬಂಗೇರ ಪರ್ಲ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment