ಬಂಟ್ವಾಳ, ಮಾರ್ಚ್ 13, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಶುಭ್ರ-ಸ್ಫಟಿಕ ರಾಜಕಾರಣಿ ರಮಾನಾಥ ರೈಗಳನ್ನು ಅಪಪ್ರಚಾರಕ್ಕೆ ಬಲಿಯಾಗಿ ಜನ ಸೋಲಿಸಿದರು. ಆದರೆ ಬಿಜೆಪಿಯಲ್ಲಾದರೂ ಸ್ವಲ್ಪ ಜನರಿಗಾಗಿ ಕೆಲಸ ಮಾಡಿದವರನ್ನು, ಜನಪರ ಕಾಳಜಿಯುಳ್ಳವರನ್ನಾದರೂ ಗೆಲ್ಲಿಸಿದ್ದಾರಾ? ಬಿಜೆಪಿ ಪಕ್ಷದಿಂದ ನಾಲಾಯಕ್ ಗಳನ್ನೇ ಗೆಲ್ಲಿಸಿದ ನಮ್ಮ ಜನ ಇದೀಗ ಕೈ ಕೈ ಬಡಿದುಕೊಳ್ಳುವಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮೃತ ಶೆಣೈ ಹೇಳಿದರು.
ರಮಾನಾಥ ರೈ ನೇತೃತ್ವದ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ ಮೂರನೇ ದಿನದ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಸಂಜೆ ವಾಮದಪದವು-ಬಸ್ತಿಕೋಡಿ ಜಂಕ್ಷನ್ನಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಟ್ವಾಳದ ಶಾಸಕರ ಹೆಸರೇ ಪರಿಚಯಕ್ಕೆ ಬಂದಿಲ್ಲ. ಮತ್ತೆಲ್ಲಿ ಅಭಿವೃದ್ದಿ ಪಟ್ಟಿ ಮಾಡೋದು? ಜನಸಂಖ್ಯೆ ಜಾಸ್ತಿಯಾಗಲು ಕಾಂಗ್ರೆಸ್ ಸರಕಾರ ಸರಿಯಾಗಿ ಕರೆಂಟ್ ಕೊಟ್ಟಿಲ್ಲ ಎಂಬ ನಾಲಾಯಕ್ ಹೇಳಿಕೆ ನೀಡುವ ಬಿಜೆಪಿ ನಾಯಕರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ರೆಸಾರ್ಟ್ ನಲ್ಲಿ ತಂಗಿ ಮಂಚದಲ್ಲಿ ಮಲಗಿ ಬಂದ ಸರಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಮೋದಿಯ ಡಿಜಿಟಲ್ ಇಂಡಿಯಾ ಕ್ಯಾಶ್ ಲೆಸ್ ಇಂಡಿಯಾ ಎಲ್ಲಾ ಯಾರಿಗೆ ಬೇಕಾಗಿ? ಬಿಜೆಪಿ ನಾಯಕರಲ್ಲಿ ಕೋಟಿ ಕೋಟಿ ಕಂತೆಗಟ್ಟಲೆ ನಗದು ಹಣ ಸಿಗುತ್ತಿದೆ ಎಂದಾದರೆ ಇವರ ಉದ್ದೇಶ ದೇಶದ ಜನರಿಗೆ ಅರ್ಥ ಆಗುವುದಿಲ್ಲ ಎಂದೆನಿಸಿಕೊಂಡಿದ್ದಾರೋ ಏನೋ? ಹಲ್ಕಾ ಕೆಲಸ ಮಾಡಿಕೊಂಡು ಬಂದ ಬಿಜೆಪಿಗರ ಮಧ್ಯೆ ಸ್ವಲ್ಪ ವೈಯುಕ್ತಿಕವಾಗಿ ಮಾತನಾಡುವ ಸಂದರ್ಭ ಇದೀಗ ಬಂದಿದೆ. ಇಲ್ಲದಿದ್ದರೆ ಕಾಂಗ್ರೆಸ್ ಯಾರದೇ ವೈಯುಕ್ತಿಕ ವಿಷಯ ಮಾತನಾಡಿ ಚುನಾವಣೆ ಎದುರಿಸಿದ ಇತಿಹಾಸವೇ ಇಲ್ಲ. ಕಾಂಗ್ರೆಸ್ ಸರಕಾರ ಮಾಡಿದ ಅಭಿವೃದ್ದಿ ಹೇಳಿಕೊಂಡು ಮುಗಿಸಲಿಕ್ಕೇ ಸಮಯ ಸಾಕಾಗ್ತಾ ಇಲ್ಲ ಎಂದರು.
ಮನುಷ್ಯ ಸಾವಿನಲ್ಲೂ ಲಾಭ-ನಷ್ಟದ ಲೆಕ್ಕ ಹಾಕುವ ಏಕೈಕ ಪಕ್ಷ ಇದ್ರೆ ಅದು ಬಿಜೆಪಿ ಮಾತ್ರ. ದೇವರು ಮೆಚ್ಚುವ ಅತೀ ಹೆಚ್ವು ಧಾರ್ಮಿಕ ಕೈಂಕರ್ಯಗಳನ್ನು ಮಾಡಿದವರು ರೈಗಳು ಹಾಗೂ ಕಾಂಗ್ರೆಸ್ಸಿಗರು ಆದರೆ ಅವರು ಹಿಂದೂ ವಿರೋಧಿಗಳು. ಮರ್ಯಾದೆ ಮೀರಿ ಮಾಡಬಾರದ್ದೆಲ್ಲವನ್ನೂ ಮಾಡುವ ಬಿಜೆಪಿಗರು ಹಿಂದೂ ರಕ್ಷಕರು. ಇದುವೇ ಈ ನಾಡಿನ ಬಹುದೊಡ್ಡ ದುರಂತವಾಗಿದೆ ಎಂದು ಕಟಕಿಯಾಡಿದ ಅಮೃತ ಶೆಣೈ ಅಧಿಕಾರಕ್ಕಾಗಿ ಎಂತಹ ಹೇಯ ಮಟ್ಟಕ್ಕೆ ಇಳಿಯಲೂ ಹೇಸದವರು ಬಿಜೆಪಿಗರು. ಯಾರ ಕೊಲೆಯನ್ನೂ ಮಾಡಿ ಗೊಂದಲ ಸೃಸ್ಟಿಸಿ ಮತವಾಗಿ ಪರಿವರ್ತಿಸುವ ಪ್ರಯತ್ನ ಮಾಡ್ತಾರೆ. ಆದ್ದರಿಂದ ಕಾಂಗ್ರೆಸ್ಸಿಗರು ಬಹಳಷ್ಟು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು. ಅಧಿಕಾರ ಕಳಕೊಂಡರೆ ಬಿಜೆಪಿಗರಿಗೆ ರಮಾನಾಥ ರೈ ಅವರಂತೆ ರಾಜ ವೈಭವದಲ್ಲಿ ಜೀವಿಸುವ ಯೋಗವಿಲ್ಲ. ಮುಕ್ಕಿ ತಿಂದು ತಿಂದು ಅಧಿಕಾರ ಕಳಕೊಂಡ್ರೆ ನೀರಿ£ಂದ ಹೊರ ಬಂದ ಮೀನಿನಂತಾಗುತ್ತಾರೆ ಎಂದು ಶೆಣೈ ಲೆವಡಿ ಮಾಡಿದರು.
ಕೋವಿಡ್ ಕಾಲದಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿತ್ತು. ಜನಪ್ರತಿನಿಧಿಗಳೆಲ್ಲರೂ ನಾಪತ್ತೆಯಾಗಿದ್ರು. ವಿಶೇಷವಾಗಿ ಉಡುಪಿಯಲ್ಲಿ ಶೋಭಾ ಕರಂದ್ಲಾಜೆಯ ಪತ್ತೆಯೇ ಇರಲಿಲ್ಲ. ಕೋವಿಡ್ ಕಾಯಿಲೆಯಿಂದ ಜನ ಸತ್ತದ್ದಕ್ಕಿಂತ ಜಾಸ್ತಿಯಾಗಿ ಸರಕಾರ ಅವ್ಯವಸ್ಥೆ, ವೈಫಲ್ಯದಿಂದ ಸತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಐಸಿಯು ಇಲ,್ಲ ಬೆಡ್ ಇಲ್ಲ ಏನೂ ಇಲ್ಲದಂತಹ ಪರಿಸ್ಥಿತಿ ಇತ್ತು ಎಂದು ಶೆಣೈ ಕಿಡಿಕಾರಿದರು.
ಪ್ರತಿಫಲಾಪೇಕ್ಷೆ ಇಲ್ಲದೆ ಜನಸೇವೆ ಮಾಡುವ ರೈಗಳನ್ನು ಸೋಲಿಸಿ ನಾವೆಲ್ಲರೂ ಸೋತಿದ್ದೇವೆ : ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ರಮಾನಾಥ ರೈ ಮಾಡುವಷ್ಟು ಕೆಲಸ ಮಾಡುವ ಜನಪ್ರತಿನಿಧಿ ಇನ್ನೊಬ್ಬರಿಲ್ಲ. ವಿರೋಧ ಪಕ್ಷದಲ್ಲಿದ್ದರೂ, ಶಾಸಕ ಅಲ್ಲದಿದ್ದರೂ ಅವರ ಮನೆಯಲ್ಲಿ ಇಂದಿಗೂ ಅಹವಾಲು ಮಂಡಿಸಲು ಬರುವ ಸಾರ್ವಜನಿಕರಷ್ಟು ಯಾವುದೇ ಶಾಸಕರ ಮನೆ-ಕಚೇರಿಯಲ್ಲೂ ಇರಲಿಕ್ಕಿಲ್ಲ. ಅಭಿವೃದ್ದಿಯಲ್ಲಿ ರೈ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಅಪಪ್ರಚಾರ, ಸುಳ್ಳಿನಿಂದ ಮಾತ್ರ ಸೋಲಾಗಿದೆ ಎಂದರು.
ರಮಾನಾಥ ರೈ ಅವರ ಸ್ಪರ್ಧೆ ಕೊನೆಯದಾಗಲು ಕ್ಷೇತ್ರದ ಜನ ಬಿಡಲಾರರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ನಿರ್ವಹಿಸುವ ಏಕೈಕ ಜನ ಪ್ರತಿನಿಧಿ ರಮಾನಾಥ ರೈ ಅವರು. ಅವರನ್ನು ಸೋಲಿಸಿ ನಾವೆಲ್ಲಾ ಸೋತಿದ್ದೇವೆ. ಅಪಪ್ರಚಾರ-ಸುಳ್ಳು ಸುದ್ದಿಗಳಿಗೆ ಬಲಿಯಾದವರಾಗಿದ್ದಾರೆ ಈ ಕ್ಷೇತ್ರದ ಜನ. ಕಳೆದ ಐದು ವರ್ಷದಲ್ಲಿ ಇದೆಲ್ಲವೂ ಮನವರಿಕೆ ಆಗಿದೆ. ಮನವರಿಕೆ ಮಾಡಿಕೊಂಡು ಮತ್ತೆ ಗೆಲ್ಲಿಸಲು ಜನ ಕಾತುರರಾಗಿದ್ದಾರೆ. ಮುಂದಿನ ಕಾಂಗ್ರೆಸ್ ಸರಕಾರದಲ್ಲಿ ಸರಕಾರದ ಘನತೆ ಗೌರವ ಹೆಚ್ವಿಸುವ ವ್ಯಕ್ತಿತ್ವ ಹೊಂದಿರುವ ರೈಗಳನ್ನು ಅತ್ಯಧಿಕ ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಿದಾಗ ಕ್ಷೇತ್ರಕ್ಕೂ ಅಭಿಮಾನ-ಗೌರವ ಹೆಚ್ಚಾಗುತ್ತದೆ ಎಂದು ಹೇಮನಾಥ ಶೆಟ್ಟಿ ಅಭಿಮಾನ ವ್ಯಕ್ತಪಡಿಸಿದರು.
ಸೋತದ್ದಕ್ಕೆ ಬೇಸರವಿಲ್ಲ, ಅಪಪ್ರಚಾರದಿಂದ ಜನರ ದಾರಿ ತಪ್ಪಿಸಿದ್ದಕ್ಕೆ ಬೇಸರವಿದೆ : ರೈ
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ನಾನು ಸೋತದ್ದಕ್ಕೆ ಬೇಜಾರಿಲ್ಲ. ಆದರೆ ಅಪಪ್ರಚಾರದಿಂದ ಜನರ ದಾರಿ ತಪ್ಪಿಸಿದ್ದಕ್ಕೆ ಬೇಸರವಿದೆ. ಆರೋಪ ಇಲ್ಲದೆ ಅಭಿವೃದ್ದಿ ಮಾಡಿದ್ದೇನೆ. ಹತ್ಯಾ ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂಬುದನ್ನು ಪೆÇಲೀಸ್ ಕಡತ ಸಾಬೀತುಪಡಿಸಿದರೂ ಅದನ್ನು ಇನ್ನೊಬ್ಬರ ತಲೆಗೆ ಕಟ್ಟುವ ಕೆಟ್ಟ ಸಂಪ್ರದಾಯದ ಮೂಲಕ ರಾಜಕೀಯ ಲಾಭ ಪಡೆಯುವ ಸನ್ನಿವೇಶ ನಿರ್ಮಾಣ ಮಾಡ್ತಾರೆ. ಈ ಬಗ್ಗೆ ಕಾಂಗ್ರೆಸಿಗರು ಎಲರ್ಟ್ ಆಗಿ ಎಂದು ಕರೆ ನೀಡಿದರು.
ಈ ಬಾರಿ ನನ್ನ ಕೊನೆಯ ಅಸೆಂಬ್ಲಿ ಚುನಾವಣೆ. ಆದರೆ ಪಕ್ಷದ ಜೊತೆ ನಿರಂತರವಾಗಿದ್ದೇನೆ. ಕ್ಷೇತ್ರದ ಜನರೊಂದಿಗೆ ಯಾವಾಗಲೂ ಇದ್ದೇನೆ. ಮರ್ಯಾದಾ ರಾಜಕೀಯ ಮಾಡಿದ್ದೇನೆ. ಸತ್ಯದ ರಾಜಕೀಯ ಮಾಡಿದ್ದೇನೆ. ಸುಳ್ಳಿನ ಕಾಲ ಎಂದು ನಡೆಯುವ ಜನರಿಗೆ ಸತ್ಯದ ಕಾಲ ಶಾಶ್ವತವಾಗಿದೆ ಎಂದು ಜನ ಪ್ರಸ್ತುತಪಡಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ರಮಾನಾಥ ರೈ ಹೇಳಿದರು.
ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಸುದರ್ಶನ್ ಜೈನ್, ಲೋಲಾಕ್ಷ ಶೆಟ್ಟಿ, ಸಂಜೀವ ಪೂಜಾರಿ, ಅರ್ಶದ್ ಸರವು, ರಾಜೇಶ್ ರೋಡ್ರಿಗಸ್, ಪಿ ಎ ರಹೀಂ ಬಿ ಸಿ ರೋಡು, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ಸ್ಟೀವನ್ ಡಿ ಸೋಜ, ಬಿ ವಾಸು ಪೂಜಾರಿ, ಉಮೇಶ್ ಬೋಳಂತೂರು, ಸುರೇಶ್ ಜೋರಾ, ಶಬೀರ್, ಡೆಂಝಿಲ್, ಮಾಯಿಲಪ್ಪ, ಜಗದೀಶ್ ಕೊಯಿಲ, ಸದಾಶಿವ ಬಂಗೇರ, ಭಾರತಿ ರಾಜೇಂದ್ರ ಮೊದಲಾದವರು ಭಾಗವಹಿಸಿದ್ದರು.
ಚೆನ್ನೈತ್ತೋಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿ, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment