ಬಂಟ್ವಾಳ, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಬಿಜೆಪಿಗರಿಗೆ ಭಾವನಾತ್ಮಕ ವಿಷಯಗಳೇ ಚುನಾವಣಾ ವಸ್ತುವಾಗಿದ್ದು ಅಭಿವೃದ್ದಿಪರ ಚಿಂತನೆಗಳೇ ಇಲ್ಲ. ಕಾಂಗ್ರೆಸ್ ಈ ದೇಶಕ್ಕೆ, ದೇಶದ ಜನರಿಗಾಗಿ ಮಾಡಿಟ್ಟದ್ದನ್ನು ಮಾರಾಟ ಮಾಡುತ್ತಿರುವುದೇ ಬಿಜೆಪಿಯ ದೊಡ್ಡ ಸಾಧನೆ ಎಂದು ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ ಕಟಕಿಯಾಡಿದರು.
ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಶುಕ್ರವಾರ ಪೊಳಲಿ ಸಮೀಪದ ಪುಂಚಮೆಯಲ್ಲಿ ಆರಂಭಗೊಂಡ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ ಗ್ರಾಮಗಳಲ್ಲಿ ಸಂಚರಿಸಿ ಸಂಜೆ ವೇಳೆ ಬಡಕಬೈಲು ಜಂಕ್ಷನ್ನಿನಲ್ಲಿ ನಡೆದ ಮೊದಲ ದಿನದ ಸಮಾರೋಪ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಬಾರಿಯೂ ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಉಪಯುಕ್ತ ಕೊಡುಗೆಗಳನ್ನು ಘೋಷಿಸಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವೂ ಜಾರಿಯಾಗಲಿದೆ. ಪಕ್ಷದ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಘೋಷಿಸಿದ ಯೋಜನೆಗಳಲ್ಲಿ ಜನರಿಗೆ ಆಗುವ ಮಹದುಪಕಾರದ ಬಗ್ಗೆ ಪ್ರತಿ ಮನೆಗೂ ಮನವರಿಕೆ ಮಾಡುವಲ್ಲಿ ಸಫಲರಾಗಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ ಗ್ರಾಮಗಳಲ್ಲಿ ತನ್ನ ಶಾಸಕತ್ವ ಅವಧಿಯಲ್ಲಿ ಕೈಗೊಳ್ಳಲಾದ ಜನೋಪಯೋಗಿ ಅಭಿವೃದ್ದಿ ಚಿಂತನೆಯ ಕಾಮಗಾರಿಗಳ ಸ್ಪಷ್ಟ ಚಿತ್ರಣ ಜನರ ಮುಂದಿಟ್ಟರು.
ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ, ಪದ್ಮಶೇಖರ ಜೈನ್, ಎಂ ಎಸ್ ಮುಹಮ್ಮದ್, ರಾಜೇಶ್ ರೋಡ್ರಿಗಸ್, ಇಬ್ರಾಹಿಂ ನವಾಝ್ ಬಡಕಬೈಲು, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಾಶಿವ ಬಂಗೇರ, ಚಂದ್ರಹಾಸ ಶೆಟ್ಟಿ ಪಲ್ಲಿಪಾಡಿ, ಬಾಲಕೃಷ್ಣ ಆಳ್ವ ಕೊಡಾಜೆ, ಕೆ ಪದ್ಮನಾಭ ರೈ, ಮಲ್ಲಿಕಾ ಶೆಟ್ಟಿ, ಸುರೇಶ್ ಜೋರ, ಅರ್ಶದ್ ಸರವು, ಚಂದ್ರಶೇಖರ ಪೂಜಾರಿ, ಚಂದ್ರಶೇಖರ ಭಂಡಾರಿ, ಜಯಂತಿ ವಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಜಾಸ್ಮಿನ್ ಡಿ ಸೋಜ, ಫೆÇ್ಲೀಸಿ ಡಿ ಸೋಜ, ಸಿದ್ದೀಕ್ ಸರವು, ಜಗದೀಶ ಕೊಯಿಲ, ದೇವಿಪ್ರಸಾದ್ ಪೂಂಜಾ, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ಸಿರಾಜ್ ಮದಕ, ಇಬ್ರಾಹಿಂ ಗುಂಡಿ, ಸಂದೇಶ್ ಶೆಟ್ಟಿ, ಬಿಕ್ನಾಜೆ, ಮಧುಸೂಧನ ಶೆಣೈ, ಮಲ್ಲಿಕಾ ಪಕಳ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ತಿಲಕ್ ಮಂಚಿ, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ರಾಜೀವ್ ಶೆಟ್ಟಿ ಎಡ್ತೂರು, ಸ್ಟೀವನ್ ಡಿಸೋಜ, ಕುಶಲ ಎಂ ಪೆರಾಜೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment