ಬಂಟ್ವಾಳ, ಮಾರ್ಚ್ 02, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾ 4 ರಂದು ನಡೆಯುವ ಮೂಡೂರು-ಪಡೂರು “ಬಂಟ್ವಾಳ ಕಂಬಳ”ದ ಪ್ರಯುಕ್ತ ಸಿದ್ದತೆಗಳು ಭರದಿಂದ ಸಾಗುತ್ತಿದ್ದು, ಅಂತಿಮ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ.
ಶುಕ್ರವಾರ ಬೆಳಿಗ್ಗೆ ಗಣ ಹೋಮ ನಡೆಯಲಿದ್ದು, ಶನಿವಾರ ಬೆಳಿಗ್ಗೆ ಸರ್ವ ಧರ್ಮೀಯ ನಾಯಕರ ಸಮಾಗಮದ ಬಳಿಕ ಕಂಬಳದ ಅದ್ದೂರಿ ಉದ್ಘಾಟನೆ ನಡೆಯಲಿದೆ ಎಂದು ಕಂಬಳ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಕಂಬಳ ಸಮಿತಿ ಪದಾಧಿಕಾರಿಗಳಾದ ಕೆ ಮಾಯಿಲಪ್ಪ ಸಾಲಿಯಾನ್, ರಾಜೀವ್ ಶೆಟ್ಟಿ ಎಡ್ತೂರು, ಬಾಲಕೃಷ್ಣ ಆಳ್ವ ಕೊಡಾಜೆ, ಸುರೇಶ್ ಪೂಜಾರಿ ಜೋರಾ, ವಿಜಯ ಅಲ್ಲಿಪಾದೆ, ಡೆಂಝಿಲ್ ನೊರೊನ್ಹಾ ಅಲ್ಲಿಪಾದೆ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಬೂತ್ ಅಧ್ಯಕ್ಷ ಅಬ್ದುಲ್ ಮಜೀದ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment