ಬಂಟ್ವಾಳ, ಮಾರ್ಚ್ 14, 2023 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ಪಿಕಪ್ ವಾಹನ ರಾಂಗ್ ಸೈಡಿನಲ್ಲಿ ಬಂದು ಓಮ್ನಿ ವಾಹನಕ್ಕೆ ಡಿಕ್ಕಿಯಾಗಿ ಓಮ್ನಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತ ಓಮ್ನಿ ಚಾಲಕನನ್ನು ರಾಜೇಶ್ ಶೆಟ್ಟಿ ಎಂದು ಹೆಸರಿಸಲಾಗಿದೆ.
ಸೋಮವಾರ ಬೆಳಿಗ್ಗೆ ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ಓಮ್ನಿ ಚಾಲಕ ಬಿ ಸಿ ರೋಡು ಕಡೆಯಿಂದ ತೆರಳುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಬರುತ್ತಿದ್ದ ಪಿಕಪ್ ಚಾಲಕ ದ್ವಿಪಥ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬಿ ಸಿ ರೋಡ್ ಕಡೆಗೆ ಏಕ ಮುಖವಾಗಿ ರಾಂಗ್ ಸೈಡಿನಿಂದ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಬರುತ್ತಿದ್ದ ಒಮ್ನಿ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ರಸ್ತೆ ಬದಿಗೆ ಎಸೆಯಲ್ಪಟ್ಟು ಜಖಂಗೊಂಡಿದ್ದು ಕಾರು ಚಾಲಕ ರಾಜೇಶ್ ಶೆಟ್ಟಿ ಅವರ ಬಲಕಾಲಿಗೆ, ಹೊಟ್ಟೆಗೆ ಗುದ್ದಿದ ಗಾಯವಾಗಿದ್ದು, ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಮಾಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ಪಿಕಪ್ ಚಾಲಕ ಇರ್ಶಾದ್ ಎಂಬಾತನ ವಿರುಧ್ದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment