ವಿಧಾನಸಭಾ ಚುನಾವಣೆ ಹಿನ್ನಲೆ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಎಸ್ಪಿ ಪರಿಶೀಲನೆ - Karavali Times ವಿಧಾನಸಭಾ ಚುನಾವಣೆ ಹಿನ್ನಲೆ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಎಸ್ಪಿ ಪರಿಶೀಲನೆ - Karavali Times

728x90

22 March 2023

ವಿಧಾನಸಭಾ ಚುನಾವಣೆ ಹಿನ್ನಲೆ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಎಸ್ಪಿ ಪರಿಶೀಲನೆ

ಪುತ್ತೂರು, ಮಾರ್ಚ್ 22, 2023 (ಕರಾವಳಿ ಟೈಮ್ಸ್) : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಎಸ್ಪಿ ಡಾ ವಿಕ್ರಂ ಅಮಾಟೆ ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೆÇಲೀಸ್ ಅಧಿಕಾರಿಗಳೊಂದಿಗೆ ಗುಂಡ್ಯ ಹಾಗೂ ಕಬಕ ಚೆಕ್ ಪೆÇೀಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೆÇಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯಗಳ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಚೆಕ್ ಪೆÇೀಸ್ಟ್ ಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಇದೇ ವೇಳೆ ಎಸ್ಪಿ ಪೊಲೀಸರಿಗೆ ಸೂಚಿಸಿದರು. 

ಸೂಕ್ಷ್ಮ ಪ್ರದೇಶ ಹಾಗೂ ಸೂಕ್ಷ್ಮ ಮತಗಟ್ಟೆಗಳಾದ ಉಪ್ಪಿನಂಗಡಿ, ಗೋಳಿತಟ್ಟು, ಮಾದೇರಿ, ಬನ್ನೆಂಗಳ, ಕಬಕ ಹಾಗೂ ಹಾರಾಡಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮುಂಬರುವ ಚುನಾವಣೆ ಪ್ರಯುಕ್ತ ಜಿಲ್ಲೆಗೆ ಕರ್ತವ್ಯಕ್ಕೆ ಆಗಮಿಸುವ ಅರೆ ಸೇನಾಪಡೆಗಳಿಗೆ ವಾಸ್ತವ್ಯ ಕಲ್ಪಿಸಲು ಗುರುತಿಸಿರುವ ಶಾಲೆ, ಕಾಲೇಜುಗಳಿಗೂ ಎಸ್ಪಿ ಭೇಟಿ ನೀಡಿ ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ವಿಧಾನಸಭಾ ಚುನಾವಣೆ ಹಿನ್ನಲೆ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಎಸ್ಪಿ ಪರಿಶೀಲನೆ Rating: 5 Reviewed By: karavali Times
Scroll to Top