ಮಂಗಳೂರು, ಮಾರ್ಚ್ 22, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಂಗಳವಾರ (ಮಾ 21) ಉಜಿರೆಯಲ್ಲಿ ಆಂಟಿ ರಯೋಟ್ ಡ್ರಿಲ್ (ದೊಂಬಿ ನಿಗ್ರಹ ಕವಾಯತು) ತರಬೇತಿ ನೀಡಲಾಯಿತು.
ಈ ಮೂಲಕ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳು ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಸ್ಪಂದಿಸಬೇಕು, ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾದಾಗ ಯಾವ ರೀತಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿ ಎದುರಿಸಬೇಕು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.
ಇಂತಹ ತರಬೇತಿಗಳಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವೃತ್ತಿ ಕೌಶಲ್ಯ, ಜ್ಞಾನ, ಮಾನಸಿಕ ಸ್ಥೈರ್ಯ, ಆತ್ಮ ವಿಶ್ವಾಸಗಳನ್ನು ಹೆಚ್ಚಿಸಿಕೊಂಡು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.
0 comments:
Post a Comment