ಬಂಟ್ವಾಳ, ಮಾರ್ಚ್ 20, 2023 (ಕರಾವಳಿ ಟೈಮ್ಸ್) : ತಾಲೂಕಿನ ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಸೋಮವಾರ (ಮಾ 20) ನಡೆಯಿತು. ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲ್ ಅವರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಮಾವಿನಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಅಮ್ಜದಿ, ಮಾಜಿ ಖತೀಬ್ ಅಶ್ರಫ್ ಮದನಿ, ಆಲದಪದವು ನೂರುಲ್ ಇಸ್ಲಾಂ ಮಸೀದಿ ಇಮಾಂ ಹುಸೈನ್ ಸಅದಿ, ಕಟ್ಟಡದ ದಾನಿಗಳಾದ ಕೆ.ಎಫ್.ಸಿ. ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷ ಅಬ್ದುಲ್ ಖಾದರ್, ಸದಸ್ಯರಾದ ಇಮ್ರಾನ್, ಆಸಿಫ್, ಸೈಫ್ ಹಾಗೂ ತೌಸೀಫ್, ಮಾವಿನಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಎಲ್ಪೇಲ್, ಆಲದಪದವು ನೂರುಲ್ ಇಸ್ಲಾಂ ಮಸೀದಿಯ ಅಧ್ಯಕ್ಷ ಹಂಝ ಬಸ್ತಿಕೋಡಿ, ಉಪಾಧ್ಯಕ್ಷ ಸಿರಾಜ್ ಬಸ್ತಿಕೋಡಿ, ಕಾರ್ಯದರ್ಶಿ ಅಬ್ಬು ನಡಾಯಿ, ಕೋಶಾಧಿಕಾರಿ ಇಮ್ರಾನ್ ಬಸ್ತಿಕೋಡಿ, ಉದ್ಯಮಿ ರಫೀಕ್ ವಾಮದಪದವು ಮೊದಲಾದವರು ಈ ಸಂದರ್ಭ ಭಾಗವಹಿಸಿದ್ದರು.
0 comments:
Post a Comment