ನವದೆಹಲಿ, ಮಾರ್ಚ್ 28, 2023 (ಕರಾವಳಿ ಟೈಮ್ಸ್) : ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಜೋಡಣೆ ಮಾಡಲು ಇದ್ದ ಕೊನೆ ದಿನಾಂಕವನ್ನು ಕೇಂದ್ರ ಆದಾಯ ತೆರಿಗೆ ಇಲಾಖೆ ಮತ್ತೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದು, ಪರಿಷ್ಕøತ ಕೊನೆ ದಿನಾಂಕ 2023 ರ ಜೂನ್ 30 ಆಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ 1 ಸಾವಿರ ರೂಪಾಯಿ ದಂಡ ಶುಲ್ಕದೊಂದಿಗೆ ಪಾನ್-ಆಧಾರ್ ಜೋಡಣೆಗೆ ಅಂತಿಮ ದಿನಾಂಕ 2023 ರ ಮಾರ್ಚ್ 31 ಎಂದು ತಿಳಿಸಲಾಗಿತ್ತು. ಬಹಳಷ್ಟು ಮಂದಿ ತಮ್ಮ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡದೆ ಜೋಡಣೆಗೆ ಕಸರತ್ತು ಮುಂದುವರಿಸಿದ್ದರು. ಈ ಮಧ್ಯೆ ಸರ್ವರ್ ಸಮಸ್ಯೆ ಕೂಡಾ ಸಾರ್ವಜನಿಕರನ್ನು ಬಹುವಾಗಿ ಕಾಡಿತ್ತು. ಈ ಕಾರಣದಿಂದಾಗಿ ಆದಾಯ ಇಲಾಖೆ ಮತ್ತೊಮ್ಮೆ ದಂಡ ಸಹಿತ ಲಿಂಕ್ ಮಾಡಲು ಜೂನ್ 30ರವರೆಗೆ ಕೊನೆ ದಿನಾಂಕ ವಿಸ್ತರಿಸಿ ಅವಕಾಶ ನೀಡಿದೆ.
ಜುಲೈ 1 ರಂದು ಆಧಾರ್ ಜೊತೆ ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಹಾಗೂ ಅಂತಹ ಪಾನ್ ಕಾರ್ಡ್ ದಾರರು ಬ್ಯಾಂಕ್ ವ್ಯವಸ್ಥೆ ಸಹಿತ ಹಲವು ಅನಾನುಕೂಲತೆಗಳನ್ನು ಎದುರಿಸಲಿದ್ದಾರೆ ಎಂದು ಆದಾಯ ಇಲಾಖೆ ಎಚ್ಚರಿಸಿದೆ. ಇದುವರೆಗೆ ಸುಮಾರು 51 ಕೋಟಿಗೂ ಹೆಚ್ಚು ಪಾನ್ ಕಾರ್ಡ್ ಆಧಾರ್ ಜೊತೆ ಜೋಡನೆ ನಡೆಸಲಾಗಿದೆ ಎನ್ನಲಾಗಿದೆ.
0 comments:
Post a Comment