ಬಂಟ್ವಾಳ, ಮಾರ್ಚ್ 21, 2023 (ಕರಾವಳಿ ಟೈಮ್ಸ್) : ಬಿ ರಮಾನಾಥ ರೈ ಅಭಿಮಾನಿ ಬಳಗದ ವತಿಯಿಂದ ಮಂಗಳೂರು ವಿಶ್ವ ವಿದ್ಯಾನಿಲಯದ 2023ನೇ ಸಾಲಿನಲ್ಲಿ ನಡೆದ ಎಂಎಸ್ಸಿ ಇನ್ ಸೈಬರ್ ಸೆಕ್ಯುರಿಟಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಕು ಪದವಿಶ್ರೀ ಅವರನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ಸನ್ಮಾನಿಸಿದರು.
ಈ ಸಂದರ್ಭ ಜಿ ಪಂ ಮಾಜಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರಾ, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಪ್ರಮುಖರಾದ ಜೋಸ್ಪಿನ್ ಡಿಸೋಜ, ದಯಾನಂದ, ಶಿವಪ್ರಸಾದ ಆಳ್ವ, ಸುರೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಶೈಲೇಶ್ ಶೆಟ್ಟಿ, ಶಿವಾನಂದ, ಜಯರಾಮ ಶೆಟ್ಟಿ, ಆನಂದ ಶೆಟ್ಟಿ ಮೊದಲಾವರು ಉಪಸ್ಥಿತರಿದ್ದರು.
0 comments:
Post a Comment