ಮಂಗಳೂರು, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಚುರುಕುಗೊಂಡಿದ್ದು, ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜದ ಸ್ವಾಸ್ಥ್ಯಕ್ಕಾಗಿ ಗಂಡಾಂತರಕಾರಿ ಪ್ರವೃತ್ತಿಯುಳ್ಳ 11 ಮಂದಿಯನ್ನು ಜಿಲ್ಲಾ ಎಸ್ಪಿ ವರದಿ ಮೇರೆಗೆ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಅವರು ಮಾರ್ಚ್ 6 ರಿಂದ ಮುಂದಿನ ಸೆಪ್ಟೆಂಬರ್ ವರೆಗೆ ಸುಮಾರು 6 ತಿಂಗಳ ಕಾಲ ಗಡಿಪಾರು ಮಾಡಿ ಅದೇಶ ಹೊರಡಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳ್ತಮಜಲು ಗ್ರಾಮದ ಮಾಣಿಮಜಲು ನಿವಾಸಿ ಅಬೂಬಕ್ಕರ್ ಅಲಿಯಾಸ್ ಕುಂಞÂಮೋನು ಅವರ ಪುತ್ರ ನಜೀರ್ ಕುಣಿಗಲ್, ಮೂಲತಃ ಬಾಳ್ತಿಲ ಗ್ರಾಮದ ಕುರ್ಮಾನು ನಿವಾಸಿ, ಪ್ರಸ್ತುತ ಮಂಗಳೂರು ತಾಲೂಕು, ಅರ್ಕುಳ ಗ್ರಾಮದ ವಳಚ್ಚಿಲ್ ಪದವು ನಿವಾಸಿ ಅಬುಸಾಲಿ ಎಂಬವರ ಪುತ್ರ ಇಬ್ರಾಹಿಂ ಖಲೀಲ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು, ಬಡಗನ್ನೂರು ಗ್ರಾಮದ ಅನಿಲೆ ನಿವಾಸಿ ರಮಾನಾಥ ರೈ ಅಲಿಯಾಸ್ ರಾಮಣ್ಣ ಶೆಟ್ಟಿ ಅವರ ಪುತ್ರ ಜಯರಾಜ್ ರೈ ಅಲಿಯಾಸ್ ಜಯರಾಜ್ ಶೆಟ್ಟಿ, ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು, ಕಬಕ ಗ್ರಾಮದ ನೆಹರುನಗರ ನಿವಾಸಿ ಸುಲೈಮಾನ್ ಎಂಬವರ ಪುತ್ರ ಇಬ್ರಾಹಿಂ ಅಲಿಯಾಸ್ ಇಬ್ಬಿ, ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಕುಮ್ಕಿ ಕಾಲನಿ ನಿವಾಸಿ ಹಸೈನಾರ್ ಎಂಬವರ ಪುತ್ರ ಹಕೀಂ ಕೂರ್ನಡ್ಕ ಅಲಿಯಾಸ್ ಅಬ್ದುಲ್ ಹಕೀಂ, ಬೆಳ್ಳಾರೆ ಪೆÇಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು, ಕುದ್ಮಾರು ಗ್ರಾಮದ, ಬರೆಪ್ಪಾಡಿ (ಕುವೆತ್ತೋಡಿ) ನಿವಾಸಿ ಹೊನ್ನಪ್ಪ ಗೌಡ ಅವರ ಪುತ್ರ ರೋಷನ್, ಕಡಬ ತಾಲೂಕು, ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪೂವಣಿ ಗೌಡ ಎಂಬವರ ಪುತ್ರ ಪ್ರಸಾದ್, ಉಪ್ಪಿನಂಗಡಿ ಪೆÇಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು, 34ನೇ ನೆಕ್ಕಿಲಾಡಿ ಗ್ರಾಮದ ಕರ್ವೇಲು ನಿವಾಸಿ ಹುಸೈನ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಜೆಸಿಬಿ ಸಿದ್ದೀಕ್ ಅಲಿಯಾಸ್ ಸಿದ್ದೀಕ್, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಸಿಪಿಸಿ ನಿವಾಸಿ ಬಿ ಎಸ್ ಹಮೀದ್ ಎಂಬರ ಪುತ್ರ ಉಬೈದ್ ಬಿ ಎಸ್ ಅಲಿಯಾಸ್ ಉಬೈದ್ ಕುಪ್ಪೆಟ್ಟಿ, ಬೆಳ್ತಂಗಡಿ ತಾಲೂಕು, ತಣ್ಣೀರುಪಂಥ ಗ್ರಾಮದ ಬೋವುಮಜಲು ನಿವಾಸಿ ಅಬ್ಬಾಸ್ ಎಂಬವರ ಪುತ್ರ ತಸ್ಲೀಂ ಅಲಿಯಾಸ್ ತಸಲೀಂ, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ದೇವಸಕೊಳಕೆ ಬೈಲು ನಿವಾಸಿ ದಿವಂಗತ ಶೀನಪ್ಪ ಗೌಡ ಎಂಬವರ ಪುತ್ರ ಕಿರಣ್ ಕುಮಾರ್ ಡಿ ಅಲಿಯಾಸ್ ಕಿರಣ್ ಶಿಶಿಲ ಅವರನ್ನು ಜಿಲ್ಲಾಧಿಕಾರಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
0 comments:
Post a Comment