ಬೆಳ್ತಂಗಡಿ, ಫೆಬ್ರವರಿ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಕುವೆಟ್ಟು ಗ್ರಾಮದ ಸಬರಬೈಲು ಎಂಬಲ್ಲಿ ಬಸ್ಸು ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಸೇವನೆ ಮಾಡುತ್ತಿದ್ದಾಗ ಧಾಳಿ ನಡೆಸಿದ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಅರ್ಜುನ ಎಚ್ ಕೆ ನೇತೃತ್ವದ ಪೊಲೀಸರು ಆರೋಪಿತ ಪ್ರಾನ್ಸಿಸ್ ಪಾಯಸ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ಪರಾರಿಯಾಗಿರುತ್ತಾನೆ. ಸ್ಥಳದಲ್ಲಿದ್ದ ಮದ್ಯದ ಬಾಟಲಿ ಹಾಗೂ ಲೋಟವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಠಾಣಾ ಅಪರಾಧ ಕ್ರಮಾಂಕ 09/2023 ಕಲಂ 15(ಎ), 32(3) ಕೆ ಇ ಆಕ್ಟ್-1965 ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ಸಾರ್ವಜನಿಕ ಬಸ್ಸು ಪ್ರಯಾಣಿಕರ ತಂಗುದಾಣದ ಬಳಿ ಇಬ್ಬರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದಾಗ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ಸೈ ಅನಿಲ ಕುಮಾರ್ ಡಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಸುರೇಶ್ ಹಾಗೂ ಕೇಶವ ಗೌಡ ಎಂಬವರನ್ನು ಮದ್ಯದ ಪ್ಯಾಕೆಟ್‍ಗಳು, ನೀರಿನ ಬಾಟಲಿ ಹಾಗೂ ಮದ್ಯ ಸೇವಿಸಲು ಬಳಸಿದ ಗ್ಲಾಸ್ ಸಹಿತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2023 ಕಲಂ 15(ಎ) 32(3) ಕೆ ಇ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment