ಕಡಬ, ಫೆಬ್ರವರಿ 27, 2023 (ಕರಾವಳಿ ಟೈಮ್ಸ್) : ಕಡಬ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 53/1984 ಕಲಂ 62, 71(ಎ), 80, 86, 87 ಕೆಎಫ್ ಆಕ್ಟ್ ಜೊತೆಗೆ 379, 411 ಐಪಿಸಿಯಂತೆ ಶ್ರೀಗಂಧ ಹಾಗೂ ವಾಹನ ಕಳುವು ಪ್ರಕರಣದಲ್ಲಿ ಆರೋಪಿಯಾಗಿ ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಸಕಲೇಶಪುರ ತಾಲೂಕಿನ ಕಾಡೂರು-ಕೊಡಿಗೆ ಗ್ರಾಮದ ನಿವಾಸಿ ಅಬ್ಬುಬಕ್ಕರ್ (63) ಎಂಬವರನ್ನು ಕಡಬ ಠಾಣಾ ಸಿಬ್ಬಂದಿಗಳಾದ ರಾಜು ನಾಯಕ್, ಭವಿತ್ ರಾಜ್ ಹಾಗೂ ಸಿರಾಜುದ್ದೀನ್ ಅವರ ತಂಡ ಮೂಡಿಗೆರೆ ತಾಲೂಕು ಬಾಳೂರು ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿರುದ್ದ ರಾಣಿಬೆನ್ನೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 12/1985 ಕಲಂ 279, 337, 411 ಐಪಿಸಿ ಮತ್ತು ಕಲಂ 86, 87 ಕೆಎಫ್ ಆಕ್ಟ್ ಹಾಗೂ ಮೈಸೂರು ವಿವಿ ಪುರಂ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 159/1984 ಕಲಂ 379 ಐಪಿಸಿ ಪ್ರಕರಣಗಳಲ್ಲೂ ವಾರಂಟ್ ಜಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment