ಉಪ್ಪಿನಂಗಡಿ, ಫೆಬ್ರವರಿ 26, 2023 (ಕರಾವಳಿ ಟೈಮ್ಸ್) : ಪುತ್ತೂರು ತಾಲೂಕು, ಉಪ್ಪಿನಂಗಡಿ ಕಸಬ ಗ್ರಾಮದ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ 4U BEST SERVICE ಎಂಬ ಮೊಬೈಲ್ ಅಂಗಡಿಯಲ್ಲಿ ಇ-ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ ಎಸ್ ನೇತೃತ್ವದ ಪೊಲೀಸರು ಶನಿವಾರ ರಾತ್ರಿ 8 ಗಂಟೆ ವೇಳೆಗೆ ದಾಳಿ ನಡೆಸಿ ಇ-ಸಿಗರೇಟ್ ಸಹಿತ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಠಾಣಾ ಸಿಬ್ಬಂದಿಗಳಾದ, ಹರಿಶ್ಚಂದ್ರ , ಸಲೀಂ , ಜಗದೀಶ, ವಿನಾಯಕ ಅವರೊಂದಿಗೆ ಅಂಗಡಿಗೆ ದಾಳಿ ನಡೆಸಿದ ಸಿಐ ರವಿ ಬಿ ಎಸ್ ಅವರು ನಿಷೇಧಿತ ಒಟ್ಟು 52 ಇ-ಸಿಗರೇಟ್ ಸಹಿತ ಮಾರಾಟ ಮಾಡುತ್ತಿದ್ದ ಆರೋಪಿ, ಪುತ್ತೂರು ತಾಲೂಕು, ನರಿಮೊಗರು ಗ್ರಾಮದ ಮುಕ್ವೆ-ಮಣ್ಯ ಶೇಖ್ ಮಂಝಿಲ್ ನಿವಾಸಿ ಶೇಖ್ ಹಾರೂನ್ ಅವರ ಪುತ್ರ ಶೇಖ್ ಶಾಹಿದ್ (27) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಸ್ವಾಧೀನಪಡಿಸಿಕೊಂಡ ಇ-ಸಿಗರೇಟಿನ ಅಂದಾಜು ಮೌಲ್ಯ 26 ಸಾವಿರ ರೂಪಾಯಿ ಮೌಲ್ಯ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ನಿಷೇಧಿತ ಇ- ಸಿಗರೇಟ್ ಮಾರಾಟ ಮಾಡುತ್ತಿದ್ದವನ ಮೇಲೆ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ 2019 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment