ಮಂಗಳೂರು, ಫೆಬ್ರವರಿ 06, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪೊಲೀಸ್ ಠಾಣೆಗಳ ತನಿಖಾಧಿಕಾರಿಗಳು ಹಾಗೂ ತನಿಖಾ ಸಿಬ್ಬಂದಿಗಳಿಗೆ ವೈಜ್ಞಾನಿಕ ತನಿಖೆ (ಸೈಂಟಿಫಿಕ್ ಇನ್ವೆಸ್ಟಿಗೇಶನ್) ಗೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ತರಬೇತಿ ಕಾರ್ಯಾಗಾರವು ಜಿಲ್ಲಾ ಎಸ್ಪಿ ಡಾ ಅಮಟೆ ವಿಕ್ರಮ್ ಅವರ ಉಪಸ್ಥಿಯಲ್ಲಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಮವಾರ (ಫೆ 6) ನಡೆಯಿತು.
ಬೆಂಗಳೂರು ಎಫ್ ಎಸ್ ಎಲ್ ಜಂಟಿ ನಿರ್ದೇಶಕ ಡಾ ಪ್ರದೀಪ್ ಕುಮಾರ್, ನಿವೃತ್ತ ಉಪನಿರ್ದೇಶಕ ಡಾ ರವೀಂದ್ರ, ಮಂಗಳೂರು ಆರ್ ಎಫ್ ಎಸ್ ಎಲ್ ಇದರ ವೈಜ್ಞಾನಿಕ ಅಧಿಕಾರಿ ಡಾ ಕಸ್ತೂರಿ ಒಡೆಯರ್ ಅವರುಗಳು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಗಾರದಲ್ಲಿ ಸದರಿ ತರಬೇತಿಯ ಮುಂದಿನ ಹಂತದ ಪ್ರಾಯೋಗಿಕ ತರಬೇತಿಯು ಮುಂದಿನ ದಿನಗಳಲ್ಲಿ ನಡೆಯಲಿದೆ.
0 comments:
Post a Comment