ಸಾಗರ, ಫೆಬ್ರವರಿ 16, 2023 (ಕರಾವಳಿ ಟೈಮ್ಸ್) : ಬದ್ರುಲ್ ಹುದಾ ದಫ್ ಸಮಿತಿ ಸಾಗರ ಇದರ ಆಶ್ರಯದಲ್ಲಿ ಅಂತರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮಕ್ಕೆ ಇಲ್ಲಿನ ಬದ್ರಿಯಾ ಜುಮಾ ಮಸೀದಿ ಸಮೀಪದ ಮರ್ ಹೂಂ ಭಾಷಾ ತಂಙಳ್ ವೇದಿಕೆಯಲ್ಲಿ ಗುರುವಾರ (ಫೆ 16) ಸಂಜೆ ಚಾಲನೆ ನೀಡಲಾಯಿತು.
ಸಯ್ಯದ್ ಆಲವಿ ತಂಙಳ್ ದು:ಹಾ ನೆರವೇರಿಸಿ ಚಾಲನೆ ನೀಡಿದರು. ಸಾಗರ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ, ಸಯ್ಯಿದ್ ಸಹಲ್ ತಂಙಲ್ ಸಾಗರ, ನೂರ್ ಮಸ್ಜಿದ್ ಖತೀಬ್ ಮುಹಮ್ಮದ್ ಅಲಿ ಮದನಿ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಸ್ಯ ಹಮೀದ್ ಗೋಳ್ತಮಜಲು ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಮಸೀದಿ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ, ದಫ್ ತರಬೇತುದಾರ ತುಫೈಲ್ ವಿವಿಧ ವಿಭಾಗದ ಸಾಧನೆಗಾಗಿ ಬೀರಾನ್ ಹಾಗೂ ಅಶ್ರಪ್ ಅವರನ್ನು ಸನ್ಮಾನಿಸಲಾಯಿತು.
0 comments:
Post a Comment