ಮಂಗಳೂರು, ಫೆಬ್ರವರಿ 19, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರ ಸಭೆಗಳನ್ನು ಪಿಎಸ್‍ಐ, ಪಿ ಐ, ಸಿಪಿಐ, ಡಿವೈಎಸ್ಪಿ ಅವರುಗಳ ನೇತೃತ್ವದಲ್ಲಿ ಭಾನುವಾರ (ಫೆ 19) ನಡೆಸಿ ಅವರ ಕುಂದು ಕೊರತೆಗಳನ್ನು ವಿಚಾರಿಸಿ ಮಾಹಿತಿ ಪಡೆದುಕೊಳ್ಳಲಾಯಿತು.
ಅದೇ ರೀತಿ ಕಾನೂನಿನ ಬಗ್ಗೆ, ಸರಕಾರದ ಸವಲತ್ತು, ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ಸಭೆಯಲ್ಲಿ ತಿಳಿದು ಬಂದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅವಶ್ಯಕ ಸೂಕ್ತ ಕ್ರಮ ಜರುಗಿಸುವ ಬಗ್ಗೆ ತೀರ್ಮಾನಿಸಲಾಯಿತು.
0 comments:
Post a Comment