ಬಂಟ್ವಾಳ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ತಾಲೂಕಿನ ಸರಪಾಡಿ ಗ್ರಾಮದ ಪೆರರಿಯಪಾದೆ-ಅರಸೊಳಿಗೆ ರಸ್ತೆಯ ಡಾಮರು ಕಿತ್ತು ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಡಿದ್ದಲ್ಲದೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟುಮಾಡಿರುವ ಆರೋಪದಲ್ಲಿ ಪದ್ಮನಾಭ ಸಾಮಂತ್ ಎಂಬವರ ವಿರುದ್ದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಾರಾನಾಥ ಸಾಲಿಯಾನ್ ಪಿ ಅವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲಾಖೆಯ ನಿರ್ವಹಣಾ ಅನುದಾನದಡಿ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಪೆರಿಯಪಾದೆ ಅರಸೋಳಿಗೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ದುರಸ್ಥಿ ಕಾರ್ಯದಲ್ಲಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಫೆಬ್ರವರಿ 7 ರಂದು ಪ್ಯಾಚ್ ವರ್ಕ್ ಮಾಡಿ ಡಾಂಬರಿಕರಣ ನಿಲ್ಲಿಸಿದ್ದು, ಫೆ 9 ರಂದು ಸಂಜೆ 5 ಗಂಟೆ ಸುಮಾರಿಗೆ ಆರೋಪಿ ಪದ್ಮನಾಭ ಸಾಮಂತ್ ಎಂಬುವವರು ಸದ್ರಿ ಕಾಮಕಾರಿಯು ಕಳೆಪೆ ಗುಣಮಟ್ಟದಾಗಿದೆ ಎಂದು ಇಲಾಖೆಯ ಗಮನಕ್ಕೆ ತರದೇ ಏಕಾಏಕಿ ಅಕ್ರಮವಾಗಿ ಕೈಯಿಂದ ಅಗೆದು ವಿಡಿಯೋ ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿರುವುದಲ್ಲದೇ ಡಾಮರನ್ನು ಕೈಯಿಂದ ಅಗೆದು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟುಮಾಡಿರುವುದಾಗಿ ಇಂಜಿನಿಯರ್ ತಾರಾನಾಥ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2023 ಕಲಂ 431, 427 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment