ಪುತ್ತೂರು, ಫೆಬ್ರವರಿ 13, 2023 (ಕರಾವಳಿ ಟೈಮ್ಸ್) : ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ನೀರ್ಪಾಜೆ ಕ್ರಾಸ್ ಎಂಬಲ್ಲಿ ಮೋಟಾರು ಸೈಕಲ್ ಡಿಕ್ಕಿಯಾಗಿ ಪಾದಚಾರಿ ವ್ಯಕ್ತಿ ಸಹಿತ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಮೋಟಾರು ಸೈಕಲ್ ಸವಾರ ಲೋಕೇಶ್ ಎಂಬವರು ಮೋಟಾರು ಸೈಕಲನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬದಿಗೆ ಚಲಾಯಿಸಿದ ಪರಿಣಾಮ ರಸ್ತೆಯ ಬದಿಯಲ್ಲಿ ನಿಂತಿದ್ದ ಪಾದಾಚಾರಿ ಎ ಲಿಂಗಪ್ಪ ನಾಯ್ಕ ಅವರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ದೂರಲಾಗಿದೆ. ಅಪಘಾತದಿಂದ ಲಿಂಗಪ್ಪ ನಾಯ್ಕ ಅವರಿಗೆ ಮುಖದ ಬಲಭಾಗ, ಎಡಭುಜಕ್ಕೆ ಎಡ ಕೋಲು ಕಾಲಿಗೆ, ಎಡ ಮೊಣಕೈ ಮೊದಲಾದೆಡೆ ಗಾಯಗಳಾಗಿವೆ. ಆರೋಪಿ ಮೋಟರ್ ಸೈಕಲ್ ಸವಾರ ಲೋಕೇಶ ಅವರಿಗೂ ಮುಖದ ಬಲಭಾಗ, ಬಲ ಮೊಣಕೈ ಬಳಿ, ಹೊಟ್ಟೆಗೆ, ಎಡ ಮೊಣಕೈ ಬಳಿ ಹಾಗೂ ಮೂಗಿಗೆ ಗಾಯಗಳಾಗಿದ್ದು ಇಬ್ಬರನ್ನೂ ಸ್ಥಳೀಯರು ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಬಗ್ಗೆ ಪುತ್ತೂರು ಸಂಚಾರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 29/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment