ಪುತ್ತೂರು, ಫೆಬ್ರವರಿ 23, 2023 (ಕರಾವಳಿ ಟೈಮ್ಸ್) : ಪುತ್ತೂರು ಪೊಲೀಸ್ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳಲ್ಲಿ ಬುಧವಾರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ ತಾತ್ಕಾಲಿಕ ಚೆಕ್ ಪೊಸ್ಟ್‍ಗಳನ್ನು ಸ್ಥಾಪಿಸಿ ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ, 56 ಮೋಟಾರು ವಾಹನ ಪ್ರಕರಣಗಳಲ್ಲಿ ಸ್ಥಳದಂಡ ಪ್ರಕರಣ, 36 ಕೆಪಿ ಆಕ್ಟ್ ಲಘು ಪ್ರಕರಣ, 27 ಕೋಟ್ಪಾ ಪ್ರಕರಣ ದಾಖಲಿಸಲಾಗಿರುತ್ತದೆ.
70 ಜನರ ಎಂಸಿಸಿಟಿಎನ್‍ಎಸ್ ಸ್ಕಾನರ್ ತಪಾಸಣೆ, 14 ಜನ ರೌಡಿ ಶೀಟರ್‍ಗಳ ತಪಾಸಣೆ, 7 ಜನ ರೂಡಿಗತ ಆರೋಪಿಗಳ ತಪಾಸಣೆ ನಡೆಸಿದ ಪೊಲೀಸರು ಜೊತೆಗೆ ಯೂಥ್ ಕಮಿಟಿ ಮೀಟಿಂಗ್, ಸಾರ್ವಜನಿಕ ಸಂಪರ್ಕ ಸಭೆಗಳನ್ನು, ಮೊಹಲ್ಲಾ ಸಭೆಗಳನ್ನು ನಡೆಸಿ ಕಾನೂನಿನ ಅರಿವು ಮೂಡಿಸಿದರು.
0 comments:
Post a Comment