ಪುತ್ತೂರು, ಫೆಬ್ರವರಿ 17, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 09/2017 ಕಲಂ 406, 465, 468, 471, 420 ಆರ್/ಡಬ್ಲ್ಯು 34 ಐಪಿಸಿ (ನ್ಯಾಯಲಯದ ಸಿ ಸಿ ನಂಬರ್ 745/2021) ಪ್ರಕರಣದ ಆರೋಪಿ, ವಿಟ್ಲ ಕಸಬಾ ಗ್ರಾಮದ ಬೊಳಂತಿಮೊಗರು ನಿವಾಸಿ ಅಬ್ದುಲ್ ಗಫರ್ ಅವರ ಪುತ್ರ ಮೊಹಮ್ಮದ್ ಅನ್ವರ್ ಸುಮಾರು 5 ವರ್ಷಗಳಿಂದ ವಾರಂಟ್ ಇದ್ದರೂ ತಲೆ ಮರೆಸಿಕೊಂಡಿದ್ದ. ಶುಕ್ರವಾರ (ಫೆ 17) ಪುತ್ತೂರು ಠಾಣಾ ಪೊಲೀಸ್ ನೀರಿಕ್ಷಕರು ಹಾಗೂ ಉಪ ನೀರಿಕ್ಷಕರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಪರಮೇಶ್, ಉದಯ ಹಾಗೂ ಗಿರಿ ಪ್ರಶಾಂತ್ ಅವರ ತಂಡ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
17 February 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment