4 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧಿಸಿದ ಪುತ್ತೂರು ಪೊಲೀಸ್ - Karavali Times 4 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧಿಸಿದ ಪುತ್ತೂರು ಪೊಲೀಸ್ - Karavali Times

728x90

26 February 2023

4 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧಿಸಿದ ಪುತ್ತೂರು ಪೊಲೀಸ್

ಪುತ್ತೂರು, ಫೆಬ್ರವರಿ 27, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 109/2017 ಕಲಂ 454, 380 ಆರ್/ಡಬ್ಲ್ಯು 34 ಐಪಿಸಿ (ನ್ಯಾಯಲಯದ ಸಿಸಿ ಸಂಖ್ಯೆ 144/2018) ಪ್ರಕರಣದಲ್ಲಿ ಸುಮಾರು 4 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ-ಹಿರಂಗಳ್ಳಿ, ಯಾಸ್ಮಿನ್ ಮಂಝಿಲ್ ನಿವಾಸಿ, ಸಯ್ಯದ್ ಮುಹಮ್ಮದ್ ತಂಗಳ್ ಎಂಬವರ ಪುತ್ರ ಸಯ್ಯದ್ ಜಂಶೀರ್ ತಂಗಳ್ ಅಲಿಯಾಸ್ ಜಂಶೀರ್ ತಂಗಳ್ ಎಂಬಾತನನ್ನು ಪುತ್ತೂರು ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಉಪ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳಾದ ಚಂದ್ರ, ಪರಮೇಶ್, ರಾಧಾಕೃಷ್ಣ ಅವರುಗಳ ತಂಡ ಕಾಸರಗೋಡು-ಮಂಜೇಶ್ವರದಿಂದ ದಸ್ತಗಿರಿಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: 4 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧಿಸಿದ ಪುತ್ತೂರು ಪೊಲೀಸ್ Rating: 5 Reviewed By: karavali Times
Scroll to Top