ಪುತ್ತೂರು, ಫೆಬ್ರವರಿ 23, 2023 (ಕರಾವಳಿ ಟೈಮ್ಸ್) : ತಂಡಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಪುತ್ತೂರು ಬನ್ನೂರು ಗ್ರಾಮದ ನಿವಾಸಿ ವಿಜೇತ್ ಗೌಡ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ತಾನು ಎಂದಿನಂತೆ ಬೊಳುವಾರಿಗೆ ಕೆಲಸಕ್ಕೆ ಹೋಗಿದ್ದ ಸಮಯ ಸಂಜೆ ಸುಮಾರು 4.50 ರ ವೇಳೆಗೆ ತಾಯಿ ಫೆÇೀನ್ ಕರೆ ಮಾಡಿ ನೆರೆಮನೆಯ ಪ್ರತಾಪ್ ಆತನ ಸಂಗಡಿಗರಾದ ಅಭಿಜಿತ್ ಮತ್ತು ಇತರ ಇಬ್ಬರು ಮನೆಗೆ ಬಂದು ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ತಕ್ಷಣ ಮನೆಗೆ ಬಂದಾಗ ಆರೋಪಿ ಪ್ರತಾಪನ ಕೈಯಲ್ಲಿ ತಲವಾರು ಇದ್ದು, ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದು ಕಂಡು ಬಂದಿರುತ್ತದೆ. ನಾನು ತಾಯಿಯ ಬಳಿ ಹೋದಾಗ ಆರೋಪಿ ಅಭಿಜಿತನು ಆತನ ಕೈಯಲ್ಲಿದ್ದ ರಾಡಿನಿಂದ ಇತರರೊಂದಿಗೆ ಸೇರಿ ಹಲ್ಲೆ ನಡೆಸಿರುತ್ತಾನೆ. ತಾಯಿ ತಡೆಯಲು ಬಂದಾಗ ಪ್ರತಾಪನು ತಾಯಿಯನ್ನು ದೂಡಿ ಹಾಕಿರುತ್ತಾನೆ.
ಈ ಸಂದರ್ಭ ವಿಜೇತ್ ಗೌಡ ತಕ್ಷಣ ನೆರೆ ಮನೆಯವರನ್ನು ಹಾಗೂ ಸಂಬಂಧಿಕರನ್ನು ಫೆÇೀನ್ ಮಾಡಿ ಮನೆಗೆ ಬರುವಂತೆ ತಿಳಿಸಿದ್ದು, ಈ ವೇಳೆ ಮನೆಗೆ ಬಂದ ಕಿರಣ್ ಡಿಸೋಜ, ನಿಶಾ, ರವಿಚಂದ್ರ ಹಾಗೂ ರಂಜಿತ್ ಎಂಬವರಿಗೂ ಆರೋಪಿಗಳು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುತ್ತಾರೆ. ಸ್ಥಳಕ್ಕೆ ಇನ್ನಷ್ಟು ಜನರು ಬರುವುದನ್ನು ಕಂಡು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ವಿಜೇತ್ ಗೌಡ ಹಾಗೂ ಇತರರು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2023 ಕಲಂ 143, 147, 148, 448, 504, 323, 324, 307, 354, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೂರು-ನೆಕ್ಕಿಲ ನಿವಾಸಿ ಪ್ರತಾ ಪಎಂಬವರ ಪತ್ನಿ ವೈಶಾಲಿ ಅವರು ಪ್ರತಿ ದೂರು ನೀಡಿದ್ದು, ನನ್ನ ಗಂಡನಿಗೆ ಆರೋಪಿಗಳಾದ ರಂಜಿತ್, ವಿಜೀತ್, ರವಿ, ಕಿರಣ್ ಹಾಗೂ ವಿಜಯ್ ಎಂಬವರು ಚಾಕುವಿನಿಂದ ಹಲ್ಲೆ ನಡೆಸಿ, ಅವ್ಯಾಚ ಶಬ್ಧಗಳಿಂದ ಬೈದು ಜೀವಬೆದರಿಕೆ ಒಡ್ಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆಯೂ ಪುತ್ತೂರು ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2023 ಕಲಂ 143, 147, 148, 323, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment